ಆಸೆ ಆರುವ ಮುನ್ನ
ಬಂದು ಬಿಡು ಗೆಳತಿ
ಆಸೆ ಆರುವ ಮುನ್ನ
ತೀರದಿರಲಿ ಬಯಕೆ ಮೋಹ,
ಕಾಯುತಿರುವೆ ಕನಸಿನೊಡನೆ
ಕಾರ್ಮೋಡದ ನೆರಳಿನಲ್ಲಿ
ಕರಗದಿರಲಿ ಕಾಮ ದಾಹ !
ನಿನ್ನ ನೆನಪ ಬಿಸಿ ತಾಕಿ
ತುರುಸಲಿ ಬಿರಿದು ಬೊಬ್ಭಿರಿದು
ಮೆರೆಯುತಿಹುದು ಮರುಳ ಮನಸು
ಹತ್ತಿರ ಬಂದರೇನೇ ಕೆರಳಬಹುದು
ಬಿಗಿದಪ್ಪಿ ತಬ್ಬಿ ಬಯಕೆ ಹಬ್ಬಿ
ಕೊಬ್ಬಿ ಕೊನರಬಹುದು
ಸತ್ತು ಮಲಗಿಹ ಈ ಸುಪ್ತ ಮನಸು !
- ಶ್ರೀಗೋ.
24 Jul 2016, 10:17 am
Download App from Playstore: