ಮನದ ಭಾವ
ಬಾಗಿಲು ಬಳಿ ನಿಂತಿದ್ದು
ಎಲ್ಲೊ ದೃಷ್ಟಿ ನೆಟ್ಟು ಕಾದೆ
ನೀ ಬರುವ ದಾರಿ ಕಾದು
ನಿನ್ನ ಬಾಹುಗಳಲ್ಲಿ ಕರಗಿ
ನೀರಾಗಿ ಹೋಗುತ್ತೀರಲು
ಹಂಬಲದ ಕನಸಿತ್ತು ತಟ್ಟನೆ
ಎಚ್ಚೆತ್ತೇ ಪ್ರೀತಿಯ ಕನವರಿಯ
ಲೋಕದ ನಿದ್ರೆಯ ಹೊರೆ ಇಲ್ಲದೆ
ನೋವಿನ ಕಣ್ಣೀರು ತುಂಬಾ
ನಿನ್ನದೆಯ ಭಾವ ಕಣ್ಣೀರಿನ ಧಾರೆ
ನಾನು ಹುಡುಕುವುದಿಲ್ಲ
ನಿನಗಾಗಿ ಕನಸು ಕಟ್ಟುವುದಿಲ್ಲ
ನಾನು ಸಸಿಯಾಗಿ ಮೊಳೆತದ್ದು
ಹೆಮ್ಮರವಾಗಿ ಬೆಳೆದದ್ದು
ಹುಟ್ಟು ಗುಣದೊಳಗೆ
ಇದೇ ಕತ್ತಲೆಯ ರೂಪದಲ್ಲಿ.
ಭಾವನೆಗಳಿಲ್ಲದ ನಿಂತ ನೀರಿನ
ಬಾಳೊಂದು ಬದುಕಲು
@ಮಲ್ಲಿಕಾರ್ಜುನ ಸೊನ್ನದ
- mallikarjun sonnad
18 Apr 2022, 07:37 pm
Download App from Playstore: