ಮೌನದ ಪಿಸುಗುಟ್ಟು

ಮೌನದ ಮಾತು ಮಸಣಕೆ ಹೆಣವು ಮರಳಿ ಮಾತನಾಡಿಸಲು ಸಾಧ್ಯವೇ? ಮಾತಾಡು ನಿನ್ನ ನೋವಿನ ದನಿ ಕೇಳಲಿಲ್ಲವೆಂದು ಪರಿ ಪರಿ ಬೇಡಿದರೆ ಮತ್ತೆ ಕಾಡದಿದ್ದರೂ ಸಿಗುವುದೇನು ?ಮಾನವೀಯತೆ ಮರೆತು ಮರುಕ ಅಡಗಿಸಿ ಮಾತಿಲ್ಲದಂತೆ ಮಾಡಿ ಮಿಡಿದರೇನು ಮುಗಿದ ಮೇಲೆ ಸರಿ ಹೋಗುವುದೇ? ಕರುಳ ಕಿವುಚಿ ಬಿಕ್ಕಳಿಸಿ ಕಣ್ಣು ತುಂಬಾ ನೀರು ಸುರಿಸಿದರೂ ತಂಪಾದ ಉಸಿರಿನ ಬಿಸಿಲಾಗುವುದೇ?
ಇದ್ದಾಗ ತೋರದ ಪ್ರೀತಿ,ಮಮತೆ,ವಾತ್ಸಲ್ಯ,ಕರುಣೆ ಮಾತಿಲ್ಲದಂತಾದಾಗ ಹೇಗೆ ಉಕ್ಕಿ ಹರಿಯುವುದು?
ಬದುಕಿರುವ ಜನರ ಪ್ರೀತಿಸಿ ಇದ್ದಾಗಲೇ ಇರಲಾರದು ಬಾಂಧವ್ಯ ಉಳಿಸಿ ಸಂಬಂಧ ಗಟ್ಟಿಗೊಳಿಸಿ ಸಾವು ಬಂದಹೋದ ನಂತರ ಏನು ಮಾಡಿದರೂ ವ್ಯರ್ಥವೇ! ದುಃಖಿಗೆ ಸಾಂತ್ವನಿಸಿರಿ ಉಸಿರಿಲ್ಲ ಹೆಸರಿರಲಿ@ಸೊನ್ನದ

- mallikarjun sonnad

20 Apr 2022, 11:09 pm
Download App from Playstore: