ಗುರುವೆ ನಮಃ
ತ್ರಿಮೂರ್ತಿ ಸ್ವರೂಪಿ ಗುರು ದೇವನೆ
ಜ್ಞಾನಜ್ಯೋತಿ ಬೆಳಗಿಸುವಂತ ಗುರುವೆ
ವಿದ್ಯೆ ಬುದ್ಧಿ ಚಿತ್ತ ಮಸ್ತಕದಿ ತುಂಬಿಸಿ
ಶಿಸ್ಯವೃಂದವ ಶೃಷ್ಠಿಸಿದ ಗುರುವೆ ನಮಃ
ಆಕಾಶದಿಂದ ದಿಗಂತದೊರೆಗು ತೋರಿ
ಜೀವಶೃಷ್ಠಿ ಜಲಜ ನಾಗರಿಕತೆಯ ಕಲಿಸಿ
ನಾದ ಬಿಂದು ಕಲೆ ವಿಜ್ಞಾನವನ್ನು ತಿಳಿಸಿ
ಲೋಕಕಲ್ಯಾಣ ತಿಳಿಸಿಕೊಟ್ಟೆ ಗುರುವೆ
ಗುರಿ ಮುಟ್ಟುವ ತನಕ ದುಡಿಯುತ್ತಿರು
ಗೆದ್ದ ಮೇಲೆ ಛಲ ಬಿಡದಿರೆಂದು ಹೇಳ್ದೆ
ಗುರು ಪಾದವ ನಂಬಿ ನಡೆ ನಿ ಮುಂದೆ
ಹರನು ಇರುವನು ಬೆನ್ನ ಹಿಂದೆ ಎಂದೆ
ಅಕ್ಷರ ಜ್ಞಾನದ ಜೊತೆ ಜೊತೆಗೆ ತಂದೆ
ಬದುಕು ಬದಲಿಸುವ ಆಟ ಹೇಳಿಕೊಟ್ಟೆ
ಆಡಂಬರ ಅಸೂಯೆ ಹೊಟ್ಟೆಕಿಚ್ಚು ಕಿತ್ತು
ಜಾತಿ ಧರ್ಮ ಮೀರಿ ಎಂದು ಹರಸಿದೆ
ದೇವರನ್ನು ನಾನು ಕಾಣಲಿಲ್ಲ ಗುರುವೆ
ದೈವತ್ವವನ್ನು ಕಂಡೆ ನಿನ್ನಲ್ಲಿಯೆ ನಾನು
ದಾನವ ಗುಣಗಳನ್ನು ಸುಟ್ಟು ಗುರುವೆ
ಗುರುಮೂರ್ತಿಯೆ ನಾನ್ ನಮೋ ಎಂದೆ
ಡಾ. ಕಲ್ಮೇಶ ಬಡಿಗೇರ
ಬದಾಮಿ
9743539657
- Kalmesh Badiger
21 Apr 2022, 06:31 am
Download App from Playstore: