ಹಚ್ಚು ಬೆಂಕಿ
ಹಚ್ಚು ಬೆಂಕಿ ಬಿಡಬೇಡ ನಾಡಿಗೆ
ಹೊತ್ತಿ ಉರಿಯಲಿ ಬೆಂಕಿ
ಬಿದ್ದಂತೆ ಕಾಡಿಗೆ.
ಕಂಡಲ್ಲಿ ಬಸ್ಸು, ಇನ್ಯಾರದೋ ಕಾರು
ಬೆಂಕಿ ಇಡಲು ಇನ್ನೆಷ್ಟು ಹೊತ್ತು
ಉರಿದು ಹೋಗಲಿ ಯಾರಪ್ಪನ ಸೊತ್ತು?
ಹಚ್ಚು ಬೆಂಕಿ, ಮೂರು ಬಿಟ್ಟ ರಾಜಕಾರಣಿ
ಅಪ್ಪಿ ತಪ್ಪಿ ಜೈಲು ಸೇರಿದಾಗ,
ಯಾವನೋ ಅಧಿಕಾರಿ ತಲೆಕೆಟ್ಟು
ಪ್ರಾಮಾಣಿಕವಾಗಿ ನಡೆದುಕೊಂಡಾಗ.
ಹಚ್ಚು ಬೆಂಕಿ ಪ್ರಜಾ ಪ್ರಭುತ್ವದ ಬುಡಕ್ಕೆ
ಇದು ಧರ್ಮ ಸಾಮ್ರಾಜ್ಯ
ಕೇಳಬಾರದು ಯಾರೂ ನಮ್ಮ ನಡೆಯ
ಕೊಳೆತ ಧರ್ಮ ಗ್ರಂಥವೇ ನಮ್ಮ ಒಡೆಯ.
ಹಚ್ಚು ಬೆಂಕಿ, ಪಬ್ಬಲಿ ಕುಂತ ಹುಡುಗಿಗೆ
ದನ ಕಡಿದು ತಿಂದ ದಲಿತಗೆ
ಮೈ ಮರೆತ ಪ್ರೇಮಿಗೆ,
ಯಾರೂ ಸಿಗದಿದ್ದರೆ ಬಾ
ನಾನೇ ಹಚ್ಚುವೆ ನಿನಗೆ !
- ಶ್ರೀಗೋ.
25 Jul 2016, 08:41 am
Download App from Playstore: