ಮುನಿಸಿದೆ ಮನಸ್ಸಿಗೆ
ಮುನಿಸು ತರವೇ ಮುಗುದೇ
ಹಿತವಾಗಿ ನಗಲು ಬಾರದೇ
ನನಗೂ ಗೊತ್ತು ನಿನ್ನ ಮುಖದಲ್ಲಿ
ನಗು ಕಾಣದು ನಾ ರೇಷ್ಮೆ ಸೀರೆ ತಾರದೇ...
ಸೀಟ್ಯಾಕೆ ಸಿಡುಕ್ಯಾಕೆ ನನ್ನ ಬಂಗಾರಿ
ತರಲಿಲ್ಲವೆಂದು ನೀ ಹೇಳಿದ ತರಕಾರಿ
ಬೆಲೆ ಏರಿ ನಿಂತಿವೆ ಗಗನಕ್ಕೇ
ಗಂಜಿ ಜೊತೆ ಉಪ್ಪಿನಕಾಯಿ
ಸಾಕು ಊಟಕ್ಕೆ
ನಗಿಸು ಅಳಿಸು
ಆದರೆ ತೋರದಿರು ಮುನಿಸು
ಕಾಡಿಸು ಪೀಡಿಸು
ನಾ ಮುನಿದರೆ ನೀ ರಮಿಸು
@ಮಲ್ಲಿಕಾರ್ಜುನ ಸೊನ್ನದ
- mallikarjun sonnad
21 Apr 2022, 11:24 pm
Download App from Playstore: