ಹಕ್ಕಿಗಳೇ ನೀವು ಮಾತನಾಡುವ... ಮುನ್ನ
ಎಲ್ಲಾ ಪಕ್ಷಿಗಳು
ಮಾತನಾಡುವಂತಿದ್ದರೆ ,
ಜಗತ್ತಿಗೆ.. ಸಾರಿ...ಸಾರಿ...
ಹೇಳುತ್ತಿದ್ದವು
ಹೇ.. ಸ್ವಾರ್ಥಿ ಮನುಜ...
ಸೃಷ್ಟಿಯಲ್ಲಿ ಇರುವುದೆಲ್ಲಾ
ನಿನಗಾಗಿ ಮಾತ್ರವಲ್ಲ
ನಮಗೂ ಬದುಕುವ
ಹಕ್ಕಿದೆ ಬದುಕಲು ಬಿಡಿ,
ದಯವಿಟ್ಟು ಕಾಡನ್ನು
ನಾಶ ಮಾಡಬೇಡಿ,
ಪ್ರಕೃತಿಗೆ ವಿಷ ಉಣ್ಣಿಸಬೇಡಿ,
ನೀರನ್ನು ಕಲುಷಿತ ಗೊಳಿಸಬೇಡಿ,
ನಿಮಗಾದರೆ ಮನೆ ಮಠವಿದೆ..
ನಾವೆಲ್ಲಿಗೆ ಹೋಗುವುದು..?
ನಿಮಗಾದರೆ ಜೀವನಕ್ಕೆ ಬೇಕಾದ
ಎಲ್ಲಾ ವ್ಯೆಭೋಗಗಳಿವೆ
ನಾವೆಲ್ಲಿಗೆ ಹೋಗುವುದು..??
ನಮಗೂ ಜೀವವಿದೆ..
ನೋವಿದೆ..
ಹಸಿವಿದೆ..ಆಸೆಗಳಿವೆ..
ಕನಸುಗಳಿವೆ
ದೇವರು ನಮಗೆ ಕೊಟ್ಟಿರುವುದನ್ನು
ದಯವಿಟ್ಟು ಕಿತ್ತುಕೊಳ್ಳಬೇಡಿ..!!
@ಮಲ್ಲಿಕಾರ್ಜುನ ಸೊನ್ನದ
- mallikarjun sonnad
26 Apr 2022, 05:16 pm
Download App from Playstore: