ಚಿಂತೆಯಿಲ್ಲದ ಚಿತೆ

ಚಿಂತೆ ಇಲ್ಲದೇ
ಜೀವನ ಸಾಗದು
ಚಿತೆ ಏರದ ಮನುಷ್ಯರಿಲ್ಲ
ಚಿಂತೆಯಿರದೆ
ಮನುಷ್ಯನೆಂದೆನಿಸಿ
ಕೊಳ್ಳುವುದಿಲ್ಲ.
ಚಿಂತೆನರನಿಗಿಲ್ಲದೆ
ಮರಕ್ಕೆ
ಬಾಧಿಸುವುದೇ?.
ಚಿಂತೆ ಚಿತೆ ಏರಿಸುವ
ಚಿತ್ತ ಚಂಚಲ
ಗೊಳ್ಳಬಾರದು.
ಮಳೆಯಾಗಿ ಸುರಿದು
ಕಡಲಾಗಿ ಹರಿದು
ಹಗುರಾಗುವ
ಮೋಡದಂತೆ
ನೂರು ಸಾವಿರ ಚಿಂತೆಗಳ
ಗಾಳಿಯಲಿ ತೂರಿ
ಗಾಳಿಗಿಂತಲೂ
ಹಗುರವಾಗಿ
ಬಾಳಬೇಕು.

- mallikarjun sonnad

26 Apr 2022, 09:30 pm
Download App from Playstore: