ಹೆಜ್ಜೆ ಅರಿಯಲಾರೆ
ಮನದೊಳಗಿನ ಕನಸುಗಳು
ಕಮರಿ ಹೋಗುತ್ತಿವೆ
ನೆನಪುಗಳು ಬತ್ತಿ
ಬರಿದಾಗುತ್ತಲಿವೆ
ಸರಿದ ಹೋದ
ದಿನದ ಕ್ಷಣಗಳು
ಮರೆಯಾಗುತ್ತಿವೆ
ಬದುಕು ವರ್ತಮಾನಕ್ಕೆ
ತಲುಪಿದಾಗ
ಕನಸಿನಿಂದ ವಾಸ್ತವಕ್ಕೆ
ಎಳೆದು ತರುತ್ತಲಿದೆ
ಎದುರು ಕಾಣುತ್ತಿರುವದನ್ನು
ಬಿಟ್ಟು
ಮತ್ತೆ ಹಿಂದೆ ಸರಿಯುತ್ತಿದೆ
ಸ್ವಂತಕ್ಕೆ ಅಲ್ಲಾ ಬಾಡಿಗಾಗಿ
ಬಗ್ಗುತ್ತಿದೆ
ಬೆನ್ನು ಕಣ್ಣುಗಳ ಎದುರು
ತೆರೆದು ನಿಲ್ಲವ
ಜೀಕುವ ಉಯ್ಯಾಲೆ
ಬೆಸೆದು ಬಿಡುತ್ತಿದೆ
ಹಿಂದಿನ ಅನುಭವ
ಬಳಸಿಕೊಂಡು
ಉಳಿದಿಷ್ಟು ಮನಸ್ಸನ್ನು
ಬಾಡಿಗೆಗಾಗಿ ಮೈ ಅರಳಿಸುತ್ತಿದೆ
ತಪ್ಪುಮಾಡಿ
ಮುಖ ಮುಚ್ಚಿಕೊಳ್ಳುವ
ಮುಂದಿನ ಭವಿಷ್ಯವಿದೆ
- mallikarjun sonnad
01 May 2022, 05:16 pm
Download App from Playstore: