ಕತ್ತಲು ಕಳೆಯಲಿ

ಕತ್ತಲೆಯ ಕೋಣೆಯಲಿ
ಉರಿಸಿಟ್ಟ ಒಂಟಿದೀಪ
ಅದೆಷ್ಟು ಬೆಳಕ ತಾನೆ
ತೋರಬಲ್ಲದು?
ಬಾಗಿಲಿಂದ ಬೆಳಕಿನವರೆಗೆ
ಕತ್ತಲೆಯಲೇ ತಡಕಾಡುತಾ
ಹೋಗಬೇಕಷ್ಟೇ
ಹಗಲಲಿ ಹತ್ತಾರು ಬಾರಿ
ಸುತ್ತಾಡುವ ಆ ಕೋಣೆಯಲಿ
ಕತ್ತಲಲಿ ಆ ದೀಪವೂ
ತಡಕಾಡಿಸುತಿದೆ
ತನ್ನ ಶಕ್ತಿಯನುಸಾರ ಸುತ್ತಲೂ
ಬೆಳಕು ಚೆಲ್ಲಿದರೂ
ತಾನಿರುವುದು ಕತ್ತಲಲ್ಲೆಂಬ ಸತ್ಯ
ದೀಪವನೂ ಕಾಡಿಸಿರುವಾಗ
ಆ ಒಂದು ಕಿರುದೀಪದಿಂದ
ಇಡೀ ಕೋಣೆ ಬೆಳಗಬೇಕೆಂಬುದು
ಎಷ್ಟು ಸರಿ?

- mallikarjun sonnad

01 May 2022, 09:26 pm
Download App from Playstore: