ಬದುಕಿನ ಹಾದಿಯಲ್ಲಿ

ಬದುಕಿನ ಹಾದಿಯಲ್ಲಿ
ಸಂತೋಷದ ಕ್ಷಣಗಳಲ್ಲಿ
ಕುಟುಂಬದವರನ್ನು ಸ್ಮರಿಸು.
ದುಃಖದ ಕ್ಷಣಗಳಲ್ಲಿ
ತಂದೆತಾಯಿ ಗುರು
ಹಿರಿಯರನ್ನು ಪ್ರಾರ್ಥಿಸು.
ಶಾಂತಿಯ ಕ್ಷಣಗಳಲ್ಲಿ
ಮಕ್ಕಳು ಮಡದಿಯನ್ನು ಪೂಜಿಸು.
ನೋವಿನ ಕ್ಷಣಗಳಲ್ಲಿ
ನಿನ್ನ ವಿಶ್ವಾಸ ನಂಬಿಕೆಯನ್ನು
ಗಟ್ಟಿಗೊಳಿಸು ಪ್ರತಿಯೊಂದು
ಕ್ಷಣ ಕ್ಷಣಕ್ಕೂ ಪ್ರೀತಿಸುವರನ್ನು
ಅಭಿನಂದಿಸು ಗೌರವಿಸು
ಬದುಕು ನಿತ್ಯ ಸುಂದರ
ಜೀವನ ನಿತ್ಯ ಅದ್ಬುತ
ಉಸಿರು ನಿತ್ಯ ಅಮೂಲ್ಯ
ನಂಬಿಕೆಯೆ ವಿಶ್ವಾಸ ನಿತ್ಯ ಅತ್ಯತ್ತಮ
ಜೀವನ ಪ್ರೀತಿಗೆ ಪ್ರೀತಿಸು ಪ್ರತಿ ಕ್ಷಣ
ನಿತ್ಯ ಬದುಕಿದೆ ಬಾಳಿನೊಳಗೆ.

- mallikarjun sonnad

02 May 2022, 11:38 pm
Download App from Playstore: