ಸಂತಸ ಕಾಣದ ರೈತ
ತಿಳಿಯದು ಯಾರಿಗೂ ರೈತನ ಮಹಿಮೆ
ಅವನು ಪೂಜಿಸುವನು ತನ್ನ ಕಾಯಕವನ್ನು
ಬಯಸುವನು ಎಲ್ಲರ ಒಳಿತನ್ನು
ಅವನಿಗೆ ತೋರುವರು ಕೀಳಿರಿಮೆಯನ್ನು
ಒಳ್ಳೆಯ ಫಲವನ್ನು ಪಡೆಯುವೆನೆಂದು
ಭವಿಷ್ಯದ ಕನಸ್ಸು ಈಡೇರುವುದೆಂದು
ಮಾಡುವನು ರಾತ್ರಿಯೆಲ್ಲ ಕೆಲಸವ
ದಣಿಸುವನು ಶರೀರದ ತೂಕವ
ಕಾಣುವನು ಸಂತೋಷದ ಕನಸನ್ನು
ಪಡುವನು ಬಿಡುವಿಲ್ಲದೆ ಶ್ರಮವನು
ಯಾರಿಗು ತೋರನು ತನ್ನ ನೋವನ್ನು
ಹೇಳುವನು ಮನೆಯಲ್ಲಿ ಸಂತಸದ ಕನಸನ್ನು
ತೆಗಳುವರು ಅರಸರು ಈ ಮುಗ್ಧ ಮಾನವನ
ಪಡುವರು ಸಂತಸ ಅವನ ನೋವಲ್ಲಿ
ಮಾಡುವರು ಮೋಸ ಅವನ ಫಲದಲ್ಲಿ
ತಿಳಿಯದು ಕೃಷಿಕಗೆ ಈ ಪರ್ವ
ದೌರ್ಜನ್ಯ ಅರಿತ ರೈತ
ಕನಸನ್ನು ಸಾಧಿಸಲು ಸೋತ
ಅವನಿಗೆ ನೆನೆಯಿತು ಹಗ್ಗ
ಕಾಣದೆ ಹೋಯಿತು ಅವನ ಸ್ವರ್ಗ
ರೈತನ ಅನ್ನವ ಕದಿಯುವ ಭೂಪನು
ಆಡುವನು ಬಣ್ಣಗಾರಿಕೆಯ ಮಾತನು
ಅನ್ನವ ನೀಡುವ ಅನ್ನಧಾತನು
ಕೊನೆಗೆ ಕೊಡುವನು ಆತ್ಮಹತ್ಯೆಗೆ ಕೊರಳನು
ರೈತರಿಗೆ ಯಾವಾಗ ಸಿಗುವುದು ನ್ಯಾಯ
ದಲ್ಲಾಳಿಗೆ ದೊರೆಯುವುದು ಸದಾ ಆದಾಯ
ದಲ್ಲಾಳಿ ಸತ್ತರೆ ಉಳಿವನು ರೈತ
ಆದರೆ ರೈತ ಸತ್ತರೆ ಅಳಿಯುವುದು ಮಾನವ ಸಂಕುಲ...
- Shakuntala Shakuntala
28 May 2022, 01:52 pm
Download App from Playstore: