ಮನ ಸೇರಲಂಬಲ
ಓ ಮುಗ್ಧ ಮಗು ಮನಸ್ಸೇ
ಎಲ್ಲವಿತಿರುವೆನೀ ನಿನ್ನದೇ ಇಹದಲಿ
ಎನ್ನ ಮನವನು ಸೆಳೆದುಕೋ ನಿನ್ನ ಮನ ರಕ್ಷಕಿಯಾಗಿ
ಒಬ್ಬೊoಟಿ ಎನಿಸದೇ ಇಹವದು ನಾನಿರದೆ
ಕಾದಿದೆ ಮನ ನಿನ್ನ ಹುಡುಕಾಟದಲಿ
ಜಗದ ಜಂಗುಳಿ, ಮನದ ಕಲ್ಮಶತೆ,
ನಾಟಕೀಯ ನಿಸ್ವಾರ್ಥ, ದೇಹದಲ್ಲೆಲ್ಲ ವಿಷರಕ್ತ,
ಮಾತಿನಲ್ಲೆಲ್ಲ ತಾನೆಂಬ ಆಡಂಬರದ ಅಹಂ
ತನುಮನ ಎಂಬುದು ಸ್ವಾರ್ಥದಲಿ ಕಳೆದೋಗಿ
ಕ್ಷಣಿಕ ಸುಖ ಭೋಗದಾಸೆಗೆ ಅವುಗಳನು ಪಣಕ್ಕಿಟ್ಟು
ಕೀಳು ದಟ್ಟಕ್ಕೆಳೆಯುತ್ತಿಹರಲ್ಲದೆ ದರ್ಪವೆಸಗುತ್ತಿರುವರು
ಈ ಕಟುಕ ಅಹಂ ರಾಕ್ಷಸರು
ತನುವೇಳಿತೇ ಮೋಹದಲಿ ತೇಲಿಸೆಂದು
ಮನವೇಳಿತೇ ಪಾಪಕರ್ಮದಲಿ ಉಲ್ಲಾಸವಿದೆಯೆಂದು
ಸದೆಬಡೆಯುತ್ತಿರುವರಲ್ಲೋ ಸಂಕೋಲೆಯಲಿ ತನು-ಮನವ
ದೂಡುತ್ತಿರುವರಲ್ಲೋ ತಾವೆಸಗಿದ ಪಾಪದಲಿ ಪಾಲೆಂದು
ಮನಕ್ಕಿರೊವಾಸೆ ನಿರ್ಮಲ ಇಹದಲ್ಲಿರುವುದಲ್ಲವೇ
ಸತ್ಕಾರ್ಯ, ಪ್ರಾಮಾಣಿಕತೆ, ಬುದ್ಧಿಯಲಿ ತೇಲುತ
ಕೆಡುಕಂಟದ ನಿಜದೊಳೆಯಲಿ ಈಜಾಡುತ
ಮೋಹವರಿಯದ ದೇಹವನು ಸಂಗಾತಿಯಾಗಿಸಿ ಕ್ಕೊಳ್ಳುವುದಲ್ಲವೇ
ಸದಾ ಸನ್ನಡತೆ, ಸನ್ಮಾರ್ಗದ ಸ್ಪರ್ಶ ಬಯಸುತ
ಗುರುಹಿರಿಯರ ಅಪ್ಪಣೆಯಲಿ ಆನಂದಿಸುತ
ಜಗವೆಲ್ಲವನು ಸೌಹಾರ್ದದಿಂದ ಸ್ವಚ್ಛಗೊಳಿಸುತ
ಪಯಣ ಮುಗಿಸಿ ಮುಕ್ತಿ ಬಯಸುವ ತನುಮನ ವಲ್ಲವೇ
ಇದನರಿತು ಜೀವಿಸುತ್ತಿರುವ ನಿನ್ನ ಮನದ
ಸಂಗಾತಿಯಾಗಿ, ಸ್ನೇಹಿತೆಯಾಗಿ, ಸೇವಕಿಯನ್ನಾಗಲು ಒಪ್ಪುವೆಯಾ?
ನೀನರಿತಿರುವ ಇಹವನು ಕೊಂಚ ಅರಿತಿರುವೆನಾ
ಸೆಳೆದುಕೋ ಬೇಗೆನ್ನ ಮನವ ನಿನ್ನಲ್ಲಿಗೇ..
- Shakuntala Shakuntala
28 May 2022, 05:15 pm
Download App from Playstore: