ಹೋಲಿಕೆ ಪ್ರಪಂಚ
ನಿಮ್ಮ ಶರೀರವು ಹೂವಿನಂತೆ
ಹೂವು ಎಂಬುದು ಸೂರ್ಯನಂತೆ
ಸೂರ್ಯ ಮತ್ತು ಹೂವು ಬೇಗ ಮುಗಿಯುತ್ತದೆ
ನಮ್ಮ ಜೀವನ ಸಿಹಿಕಹಿ ತಿಳಿದು ಮುಗಿಯುತ್ತದೆ
ಪುಷ್ಪವು ತನ್ನ ಅವಧಿಯಲ್ಲಿ ಸುಗಂಧ ನೀಡುತ್ತದೆ
ಭಾಸ್ಕರನು ತನ್ನ ಸಮಯದಲ್ಲಿ ಬೆಳಕು ಚೆಲ್ಲುವನು
ಸೂರ್ಯ ಮತ್ತು ಪುಷ್ಪವು ಅನಾದಿಕಾಲದಿಂದಲೂ
ತನ್ನ ಕಾರ್ಯ ನಿರಂತರವಾಗಿ ನಡೆಸುತ್ತಿವೆ
ಸೂರ್ಯನು ಸದಾ ಒಳ್ಳೆಯ ಕೆಲಸದ ಕೇಂದ್ರ ಬಿಂದುವಾಗಿದ್ದಾನೆ
ಪುಷ್ಪವು ಸಹ ದೇವರಿಗೆ ಅನಾದಿಯಿಂದಲೂ ಸುಗಂಧ ಬೀರಿದೆ
ಆದರೆ ಇವುಗಳನ್ನು ಅನುಭವಿಸುವ ಮಾನವನಾದ ನೀನು
ಏನು ಮಾಡುತ್ತಿರುವೆ ಅನಾದಿಯಿಂದಲೂ
ಮಾನವನು ಯಾವಾಗಲೂ ಸೂರ್ಯನಂತೆ,
ಪರಿಮಳ ಬೀರುವ ಪುಷ್ಪದಂತೆ
ಎಲ್ಲರಿಗೂ ಒಳಿತನ್ನು ಹಾರೈಸಬೇಕು
ಮುಂದಿನ ಕಾರ್ಯಕ್ಕೆ ಸ್ವಾಗತ ತೋರಬೇಕು
ಹೂವಿನ ಕಾಲಾವಧಿ ಕಡಿಮೆ
ಆದರೆ ಸೌಂದರ್ಯ ಹೆಚ್ಚು
ಅದು ಮುಸ್ಸಂಜೆ ಬಾಡುವೆನೆಂದುಕೊಂಡರು
ಬೀರುತ್ತದೆ ಪರಿಮಳ
ಸೂರ್ಯನು ದಿನದಲ್ಲಿ ಇರುವುದು ಕಡಿಮೆ
ಆದರೆ ಅವನ ಬೆಳಕು ಹೆಚ್ಚು
ಮಾನವ ಇರುವುದು ಹೆಚ್ಚುಕಾಲ
ಆದರೆ ಅವನ ಸಾಧನೆಯ ಕಾರ್ಯ ಕಡಿಮೆ
ಶರೀರವು ಹೂವಿನಂತೆ ಬಾಡುತ್ತದೆ
ಸೂರ್ಯ ಮುಳುಗುವಂತೆ ಮಣ್ಣಿನಲ್ಲಿ ಸೇರುತ್ತದೆ
ಇವು ಮುಳುಗುವುದರಲ್ಲಿ ಒಳ್ಳೆಯ ಕಾರ್ಯ ಮುಗಿಸುವಂತೆ
ಮಾನವನು ತಾನು ಬಾಡುವುದಕ್ಕೂ ಮುಂಚೆ ಮಾಡಬೇಕು ಸಾಧನೆಯ....
- Shakuntala Shakuntala
28 May 2022, 05:18 pm
Download App from Playstore: