ಅವನ‌ ಪ್ರೀತಿ

ಅವನ ಪ್ರೀತಿ ಸೋಕಿ
ಕಲ್ಲು ಕರಗಿತು
ಹೂವು ಅರಳಿತು
ಎದೆಯೊಳಗೆ

ಪ್ರೇಮ ಧಾರೆ ಹರಿದು
ಕಂಬನಿಯೂ ನಕ್ಕಿತು
ಮಿಂಚು ಮಿಂಚಿತು
ಕಣ್ಣೊಳಗೆ

ಪ್ರೀತಿ ಬೀರುವ ನೋಟಕೆ
ನೋವು ನಂದಿತು
ನಗುವು ತುಂಬಿತು
ಅಧರದೊಳೊಗೆ

ನುಡಿವ ನುಡಿಗೆ
ಮೌನ ದಣಿಯಿತು
ಮಾತು ಹುಟ್ಟಿತು
ಮನದೊಳಗೆ

ಮುತ್ತಿನ ಮಳೆಹನಿದು
ಚಿಂತೆ ಕಂಪಿಸಿತು
ನಾಚಿಕೆ ಹರಿಯಿತು
ಅಧರದಂಚಿಗೆ

ಕಿರು ಬೆರಳ ಹಿಡಿಯಲು
ಭವ ಭಯ ಮರೆಯಿತು
ಜಗವೇ ಹಿಡಿಯಾಯಿತು
ಕೈಯೊಳಗೆ

- ಶ್ರೀಕಾವ್ಯ

17 Jun 2022, 08:21 pm
Download App from Playstore: