ಕವಿತೆಗಳೇ ನೀವ್ ಹೇಳಿ !

"ಕವಿತೆಗಳೇ ನೀವ್ ಹೇಳಿ !
ನಾ ಏಕೆ ಗೀಚುವೆ ನಿಮ್ಮ...
ಮನಬಂದ ಹಾಗೆಲ್ಲ !
ಖುಷಿಯಲ್ಲಿ.. ಮೂಡೋರು ನೀವೇ !
ನೋವಲ್ಲಿ.. ಜೊತೆ ಅದು ನೀವೇ !
ಯಾಕಿಷ್ಟು ಹತ್ತಿರ ನೀವು ?
ನನ್ನ ಅಂತರಾಳಕೆ !!"
"ಹೇಳ_ಬಯಸುವ ಮಾತೆಲ್ಲಕ್ಕೂ...
ನೀವೇನೆ ವೇದಿಕೆಯು !
ನನ್ನ ಕಲ್ಪನೆ ಕಲೆಯಾಗಲು..
ನೀವೇನೆ ಸದಾ ಜೊತೆಯು !
ಆತ್ಮಸ್ಥೈರ್ಯವೋ..?
ಆಪ್ತ ಬಂಧುವೋ..?
ನೀವ್ ಅದರಿ ನನಗೆ..
ಹುಚ್ಚನಂತೆ ಹಚ್ಚಾಗಿ !
ನನ್ನೊಳಗಿನ ಕಿಚ್ಚಾಗಿ !
ಜೊತೆ ಅದಿರಿ ಹೀಗೆ...
ನನ್ನ ಅಂತರಾಳಕೆ !!"
ಎಮ್.ಎಸ್.ಭೋವಿ....✍️

- mani_s_bhovi

16 Jul 2022, 10:12 pm
Download App from Playstore: