ಕವನ"ಪರಿಸರ"

ಪರಿಸರದಲ್ಲಿ ಅಂದ ಗಿಡಗಳು
ಗಾಳಿಯಿಂದ ತಂಪು ನಮ್ಮ ಕಂಗಳು
ಪ್ರಕೃತಿಯೇ ಹಸಿರು
ಗಿಡ ಮರಗಳಿಂದ ಉಸಿರು

ಪರಿಸರದ ಸ್ವಚ್ಛ ಸುಂದರ
ಆರೋಗ್ಯಕ್ಕೆ ಲಾಭಕರ
ಗಿಡ ಉಳಿದರೆ ಜಗ ನಗುವುದು
ಗಿಡ ಕಡಿದರೆ ಜಾಗ ಅಳುವುದು

ಪರಿಸರ ಸ್ವಚ್ಛವಿಲ್ಲದಿದ್ದರೆ ಭಯಂಕರ
ಪರಿಸರ ಸ್ವಚ್ಛವಿದ್ದರೆ ಸಡಗರ
ಗಿಡ ಮರಗಳಿಗೆ ನೀರು
ಮರ-ಗಿಡಗಳಿಂದ ಉಸಿರು

ಸುತ್ತಮುತ್ತಲಿನ ವಾತಾವರಣವೇ ಪರಿಸರ
ಪರಿಸರವನ್ನು ನೋಡಿದರೆ ಸಡಗರ
ವನದಿಂದಲೇ ಮಳೆ
ಮಳೆಯಿಂದಲೇ ಬೆಳೆ

ಗಿಡ ಮರಗಳನ್ನು ಕಡಿದು ನಾಶ ಮಾಡದಿರಿ
ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಎಸೆಯದಿರಿ
ಅರಣ್ಯವಿಲ್ಲದೆ ಮಳೆ ಇಲ್ಲ
ಮಳೆ ಇಲ್ಲದೆ ಬೆಳೆ ಇಲ್ಲ


ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

"ತ್ರಿಶಾ ೮ ನೇ ತರಗತಿ"





- Deepa Sudhakar

17 Jul 2022, 12:06 pm
Download App from Playstore: