ನನ್ನವಳು...!!
ಕಣ್ಣಿನಲ್ಲೇ ಕೊಲ್ಲುವ ಚೆಲುವೆ,
ನೋಡಿ ಮರುಳಾದೆ ಒಲವೆ...!!
ಕೋಮಲವಾದ ಮುಖದ ಚೆಲುವು,
ಸೌಂದರ್ಯಕ್ಕೆ ಇವಳೇ ನಿಲವು...!!
ಬಾನಚಂದಿರನು ಸೋತಿಹನು,
ಬಣ್ಣಿಸಲಾಗದೆ ಕಳೆದೋದನು...!!
ನಗುವ ಗುಲಾಬಿಯ ನಗು ಇವಳು,
ಚಂದಿರನ ಗೆದ್ದ ಚೆಂದುಳ್ಳಿ ಇವಳು...!!
ತಾರೆಗಳಂತೆ ಮಿನುಗುವಳು,
ಬಲು ಬೇಗ ತನ್ನತ್ತ ಸೆಳೆಯುವಳು...!!
ಕನಸಲ್ಲಿ ಕಾಡುವ ಕಳ್ಳಿ ಇವಳು,
ಕಲ್ಪನಾ ಲೋಕದ ಮಹಾರಾಣಿ ಇವಳು...!!
ಎಮ್.ಎಸ್.ಭೋವಿ....✍️
- mani_s_bhovi
23 Jul 2022, 09:47 pm
Download App from Playstore: