ಆತ್ಮ ವಿಶ್ವಾಸ

ಓಡುವವರು ಓಡಲಿ
ಗೆಜ್ಜೆ ಕಟ್ಟಿ ಕುಣಿದು ಕುಪ್ಪಳಿಸಿ
ಎದ್ದು ಬಿದ್ದು ಓಡಲಿ

ಕಲ್ಲು ಮುಳ್ಳು ಚುಚ್ಚಿದರು
ನೀನು ಇಡುವ ಹೆಜ್ಜೆಯೂ
ಎಂದೆಂದಿಗೂ ನಿಲ್ಲದ
ಗೆಲುವಿನ ನಡೆಯಾಗಿರಲಿ
ಸಾಧನೆಯ ಹೆಜ್ಜೆಯಾಗಿರಲಿ


ಚಿಂತೆ ಇಲ್ಲದ ಮನವಿಲ್ಲ
ಚಿತೆ ಇಲ್ಲದೆ ಕೂಳು ಇಲ್ಲ
ಚಿಂತೆ ಇರಲಿ ಹಿತವಾಗಿ
ಚಿತೆ ಇರಲಿ ಮಿತವಾಗಿ
ಚಿಂತೆ ಚಿತೆಯೂ ಅತೀಯಾದರೆ
ಮನ ಮನೆ ಚಿತಗಾರವಾಗುವುದು






















- ರಾಜು ಹಾಸನ

25 Jul 2022, 10:08 pm
Download App from Playstore: