ಜೀವನ ಸಾಗರ

ಜೀವನ ಸಾಗರದಲಿ
ಯಾರು ಮುಳುಗುವರೋ!,ಯಾರು ತೇಲುವರೋ!..
ಒಂದು ಕಡೆ ಮುಳುಗೋಕು ಆಗದೆ
ಒಂದು ಕಡೆ ತೇಲೋಕು ಆಗದೆ,
ಯಾರು ಇನ್ನೊಬ್ಬರಿಗಾಗಿ ಕೈ ಚಾಚ್ತಾರೋ..
ಜೀವನವೇ ಒಂಥರಾ ವಿಚಿತ್ರ ಅನ್ಕೊಂಡಿದ್ದು ಆಗಲ್ಲ
ಆದ್ರೆ ಅದು ಇಷ್ಟ ಆಗಲ್ಲ..
ನಮಗೆ ತಿಳಿದೇನೆ ಈ ಜೀವನ
ಸಮುದ್ರದ ಅಲೆಗಳಂತೆ ‌ಮತ್ತೆ ಮತ್ತೆ ಕಷ್ಟಗಳಿಗೆ ಅಪ್ಪಳಿಸುತ್ತೆ..
ಬದುಕಿನಲಿ ಏನಾಯ್ತು ಅಂತ ಹಿಂತಿರುಗಿ ನೋಡುವಷ್ಟರಲಿ
ಭೂತಾಯಿ ನಮ್ಮನ್ನ ತನ್ನ ಮಡಿಲಿಗೆ ಸೇರಿಸಿ
ಶಾಶ್ವವಾಗಿ ಮಲಗಿಸಿರ್ತಾಳೆ..



- Asha

10 Aug 2022, 08:56 pm
Download App from Playstore: