ವಾಸ್ತವ!!!
ಹುಟ್ಟಿನೋಳ್ ಪಡೆದ ಒಂದೇ ಪರಿಯ ಜನ್ಮ
ಅದರಲ್ ಬೇಡುವನ್ ಬಿಕ್ಷಕನಾಗುವನೇ?
ಪಡುವ ಶ್ರಮದ ಪರಿ ಬೇರೆಯಾದರೋಳ್
ಶ್ರಮದ ಕೈಗಳ್ ಉಂಬುವ
ರೀತಿ ವಿಧಿ ಬೇರೆಯೇ?
ಮನದೊಳ್ ಕೆಟ್ಟಬುದ್ದಿಯ೦
ಬಾಯಿಯೋಳ್ ಇಟ್ಟ
ನುಡಿ ಶುದ್ದಿಯ೦
ಅವ ನಿಜ ಮನುಜನೇ?
ಸತ್ಯಕ್ಕೆ ಕಷ್ಟ ಇಟ್ಟಿ
ದ್ರೋಹಕ್ಕೆ ಕೋಟೆ ಕಟ್ಟಿ
ನ್ಯಾಯದ್ ಕಣ್ಗೆ ಬಟ್ಟೆ ಸುತ್ತಿ
ಅನ್ಯಾಯದ್ ಕಣ್ಣ ನೋಡಲಬಿಟ್ಟ
ನೋಡುತಿಹ ಅವ ನಿಜ ದೈವನೇ?
ಪಟ್ಟದ್ದು ಪಟ್ಟ ಹಾಗೆ
ಕೊಟ್ಟದ್ದು ಕೊಟ್ಟ ಹಾಗೆ
ಇಟ್ಟದ್ದು ಇಟ್ಟ ಹಾಗೆ
ಪಡೆದುದವೆಲ್ಲವನು
ಬಿಟ್ಟು ಹಿತದಿ ಪೋಗುವುದೇ
ನೃತ ಜೀವನ...
- Arun Naik
18 Aug 2022, 02:50 pm
Download App from Playstore: