"ಅವಳ ಹುಡುಕಾಟ...!!"

"ನಿನ್ನ ಹೆಸರೆ ಇಹುದು.. ಮನದ ಊರಿಗೆ!
ನನ್ನ ಹೆಸರೆ ಇರಬೇಕು.. ನಿನ್ನ ಹೆಸರ ಕೊನೆಗೆ!
ನಿನ್ನ ಗುರುತೆ ಬೇಕು.. ಮನದ ಬೀದಿಗೆ!
ಬೆಳಕಾಗಿ ಬಾರೆ.. ನನ್ನ ಬದುಕ ರೀತಿಗೆ!
ನಿನ್ನ ಒಲವಾಧರೆ ಸುರಿಯಲಿ.. ನನ್ನ ಕಡೆಗೆ!
ಮನದ ಕಣ_ಕಣವು ಹಂಬಲಿಸಿದೆಯೆ.. ನಿನ್ನ
-ಒಲವಿಗೆ!!"
"ಮರೆಸು ಜಗವ.. ನಿನ್ನ ಇರುವಿಕೆಯಲ್ಲಿ!
ಕಲಿಸು ಒಲವ ಪಾಠ.. ನನಗಿಲ್ಲಿ!
ಎಂದೋ ಕಳೆದೋಗಿರುವೆ ನಾ.. ನನಗಿಲ್ಲಿ!
ನಿನ್ನನ್ನೆ ಹುಡುಕುತ್ತ... ಈ ಜಗದಲ್ಲಿ!!"
ಎಮ್.ಎಸ್.ಭೋವಿ....✍️

- mani_s_bhovi

03 Sep 2022, 12:40 am
Download App from Playstore: