ಹೇಳು_ಬಾ_ಏಕೆ ?

"ಕನಸಲ್ಲಿ ಬರುವೆ ನೀ...ಏಕೆ ?
ದೂರಾದರು ಕಾಡಿಹೆ...ಏಕೆ ?
ಕಾಡುತ ಕೊಂದಿಹೆ...ಏಕೆ ?
ನೀ ಒಪ್ಪಿದ ದಿನಗಳು...
ನನ್ನಪ್ಪಿದ ಕ್ಷಣಗಳು...
ಕಣ್ಮುಂದೆಯೆ ಇನ್ನು ಇದೆ...ಏಕೆ ?!"
"ಭಾವ ಮಾಸದೆ..ಜಾಸ್ತಿ ಆಗಿದೆ !
ನೀ_ಹೋದ ದಾರೀಲೆ..ಕಾದು ನಿಂತಿದೆ !
ಕೇಳು ಬಾರೆಲೇ..ಏಕೆ_ಏನೆಂದು !
ಕೂಗು ಬಾರೆಲೇ..ಪ್ರೇಮದಿ 'ಮಣಿ' ಎಂದು !
ಶುರುವಾಗೋದಷ್ಟೆ..ಗೊತ್ತು_ಅದಕೆ !
ಕೊನೆಯಾಗೋ ರೀತಿಯೆ..ಬಾರದದಕೆ !
ಕೇಳು_ಬಾ ಏಕೆ ?..ಕೇಳೇಳು_ಬಾ ಹೀಗೇಕೆ !!"
ಎಮ್.ಎಸ್.ಭೋವಿ....✍️

- mani_s_bhovi

15 Sep 2022, 11:04 pm
Download App from Playstore: