ಹೃದಯದ ಮಿಡಿತ

ಹೃದಯ ಮಿಡಿವಾಗ
ನುಡಿವ ಹೆಸರು
ನನ್ನ ಇನಿಯಳ
ಪ್ರೀತಿಯುಸಿರು!!❤️❤️

ತನುವು ದೂರವು
ಮಾತು ಮೌನವು
ಹೃದಯ ಉಲಿವುದು
ನಿನ್ನ ಹೆಸರದು!!❤️❤️

ದೇಶ ಭಾಷೆಯ
ಜಾತಿ ಧರ್ಮದ
ಕಟ್ಟು ಪಾಡನು
ಕೇಳಲಾರದು!!❤️❤️

ಕಪ್ಪು ಬಿಳುಪಿನ
ವರ್ಣ ಭೇದವು
ಅಂದ ಚಂದದ
ಪರಿವೆ ಇಲ್ಲವು!!❤️❤️

ಸಿರಿಯು ಸಂಪದ
ಸ್ಥಾನ ಮಾನದ
ಓದು ಬರಹದ
ಸೊಲ್ಲನರಿಯದು!!❤️❤️

ಕ್ಷಣವು ಪ್ರತಿಯದು
ಒಂದೇ ನಾದವು
ಹೃದಯ ಮಿಡಿವುದು
ನಿನ್ನ ಹೆಸರದು!!❤️❤️
ಹೃದಯ ಮಿಡಿವುದು
ನಿನ್ನ ಹೆಸರದು!!❤️❤️

- ಜೈಮಿನಿ

18 Sep 2022, 11:22 am
Download App from Playstore: