ಅಹಿಂಸಾ ಸಾರಥಿ


ಭವ್ಯ ಭಾರತದ ಕನಸನ್ನು ಕಂಡ ಭಾರತದ ನಾಯಕ..
ಶಾಂತಿ ಸೌಹಾರ್ದತೆಯ ಉಣಪಡಿಸಿದ ಪ್ರತಿಪಾದಕ..
ಅಹಿಂಸಾತ್ಮಕ ಆಲದ ಮರವ ಬೆಳೆಸಿದ ನಾಡಿನ ರೈತ..
ಭಾರತ ರಾಷ್ಟ್ರಕ್ಕೆ ಸ್ವಾತಂತ್ರ್ಯ ನೀಡಿದ ಭಾಗ್ಯವಿಧಾತ ...


ಸತ್ಯಮೇವ ಜಯತೆ ಘೋಷಣೆಯ ಹರಿಬಿಟ್ಟರು..
ಚಿತ್ತದಾಸದಲ್ಲಿ ಮುಳುಗಿದ ಭಾರತೀಯರ ಮುಕ್ತಗೊಳಿಸಿದರು..
ಬ್ರಿಟಿಷ್ರ ವಿರುದ್ಧ ಹೋರಾಡಲು ಪ್ರಜೆಗಳನ್ನು ಒಗ್ಗೂಡಿಸಿದರು..
ಸರ್ವತೋಮುಖ ಗುರಿಯ ಸಾಧಿಸುವ ಛಲವಾ ಅರಿತಿದ್ದರು..


ಸ್ವಾತಂತ್ರ್ಯದ ಮೂಲದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ನಡೆಸಿದರು..
ಅಸಹಕಾರ ಚಳುವಳಿಯ ಮೂಲಕ ಪರದೇಶಿಯ ಸರಕುಗಳನ್ನು ತೇಜಿಸಿಸಿದರು..
ಮಾನವೀಯತೆ ತಾಳ್ಮೆ ಅಹಿಂಸಾ ಮಾರ್ಗದ ಸಭಿ ರುಚಿಯ ತಿಳಿಸಿದರು..
ಕಾಯಕವೇ ಕೈಲಾಸ ಎಂದು ಬಲವಾಗಿ ಅರ್ಥೈಸಿದರು..


ಸ್ವಾತಂತ್ರ್ಯ ಸಿಗದೇ ಅಂಬಲಿಸಿದ್ದ ಭಾರತೀಯರಿಗೆ ಮಾರ್ಗದರ್ಶಿಯಾದರು..
ಅಂಧಕಾರದ ಕತ್ತಲಿನಲ್ಲಿ ಬೆಳಕಿನ ಕಿರಣದಂತೆ ಆಗಮಿಸಿದರು..
ಆಡಂಬರದ ಜೀವನವ ತ್ಯಜಿಸಿ ಸರಳತೆಯ ಮೂರ್ತಿಯಾದರು..
ಸತ್ಯಾ ಶಾಂತಿ ಒಂದೇ ಮಂತ್ರವೆಂದು ಗಾಂಧಿ ಪ್ರತಿಪಾದಿಸಿದರು..


ಭಾರತ ರಾಷ್ಟ್ರ ಭಾರತೀಯರಿಂದ ಕಂಗೊಳಿಸಬೇಕು ಎಂದು ಹೇಳಿಕೆ ನೀಡಿದರು ..
ದೇಶದ ವಿಭಜನೆಯಲ್ಲಿ ಹಿಂದೂ ಮುಸ್ಲಿಮರನ್ನು ವಿಭಾಗಿಸಿದರು..
ಸ್ವಾತಂತ್ರ್ಯ ಧೀರನ ಸಮಾಜ ವಿಜ್ಞಾನಿ ಸುಧಾರಕ ರಾಗಿ ನಾಡ ಸಲುಹಿದರು..
ಆದರ್ಶಗಳ ಮೂಲಕ ಪ್ರಜೆಗಳ ಹೃದಯದ ಇಂದಿಗೂ ಅಮರ...

ಚಿದಾನಂದ.ಎನ್
ದ್ವಿತೀಯ ಪಿಯುಸಿ
ನಾರಾಯಣಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆ..

- Chidananda N

03 Oct 2022, 09:45 am
Download App from Playstore: