ನೀನು ಯಾಕೆ ಸಿಗಲಿಲ್ಲ....?


ಪ್ರತಿ ಕ್ಷಣ ನಿನ್ನ ನೆನೆದು
ದುಃಖಿತವಾದ ನನ್ನ ಮನದ
ನೋವನ್ನು ತಿಳಿಸಲು ಬಂದಾಗ
ನೀನು ಯಾಕೆ ಸಿಗಲಿಲ್ಲ..?

ಪ್ರೇಮದ ಆ ಯಾನದಲಿ
ಮನಸುಗಳು ಒಂದಾಗಿ ಕೂಡಿ
ಭಾವನೆಗಳು ಸನಿಹಕೆ ಬಂದಾಗ
ನೀನು ಯಾಕೆ ಸಿಗಲಿಲ್ಲ....!

ಎರಡೂ ಹೃದಯಗಳು ಬೆರೆತು
ಪ್ರೀತಿಯಂಬ ಜಾಲದಲ್ಲಿ ಸಿಲುಕಿ
ಮೊದಲ ಭೇಟಿಗೆ ಗುಲಾಬಿ ತಂದಾಗ
ನೀನು ಯಾಕೆ ಸಿಗಲಿಲ್ಲ..!

ಇಲ್ಲದ ಮನಸಿನ ವಿವಾಹದಲ್ಲಿ
ಸಪ್ತಪದಿ ತುಳಿಯಲು ನಡೆವಾಗ
ನಿನ್ನ ಕಂಬನಿ ಒರೆಸಲು ನಾ ಬಂದಾಗ
ನೀನು ಯಾಕೆ ಸಿಗಲಿಲ್ಲ....?

ನಿನ್ನ ಪ್ರೀತಿಯು ದೂರವಾಗಿ
ಬದುಕು ನರಕದಂತಾಗಿ
ಒಂಟಿತನವೇ ನನ್ನ ಬಯಸಿ ಬಂದಾಗ
ನೀನು ಯಾಕೆ ಸಿಗಲಿಲ್ಲ....?

ಶಿವರಾಜ ಕೋಟನಕರ
ಬಾದಾಮಿ
೮೭೪೮೮೨೧೦೭೩

- Shivaraj 72

08 Oct 2022, 10:08 am
Download App from Playstore: