ತೊಟ್ಟವರ ಕಿವಿಯಲ್ಲಿ ತೊಟ್ಟಿಲಾಗಿ ತೂಗು

ಅತ್ತಿಂದ ಇತ್ತ ಕತ್ತು ತೂಗಿದರೆ
ಕೆನ್ನೆಗೆ ಮುತ್ತಿಟ್ಟು ಬರುವ
ಉಯ್ಯಾಲೆ ಜುಮುಕಿ

ಕಿವಿಯಲಿ ಪಿಸುಗಟ್ಟುವ
ಪ್ರತಿ ಗುಟ್ಟನ್ನು ಮೊದಲು ಕೇಳಿದರು
ಯಾರಿಗೂ ಹೇಳದ ಜುಮುಕಿ

ಬಂಡಿ ಗಾಲಿಯಂತಹ
ಓಲೆಗಳ ಸಂಗದಲ್ಲಿ
ಬಿಂಕದ ಓಲೆ ಜುಮುಕಿ

ಆಲಿಸುವ ಕಿವಿಯಲ್ಲಿ
ಆಕಳಿಸೋ ಕೂಸು ಜುಮುಕಿ

ತೊಟ್ಟವರ ಕಿವಿಯಲ್ಲಿ
ತೊಟ್ಟಿಲಾಗಿ ತೂಗು

ಎಮ್.ಎಸ್.ಭೋವಿ..✍️



- mani_s_bhovi

17 Oct 2022, 07:37 pm
Download App from Playstore: