ನಿನಗಾಗಿ
ಅಂದದ ಅದರಗಳಲಿ
ಚಂದದೊಂದು ನಗುವಿರಲಿ
ಮಂದಾರ ಮನಸಿನಲ್ಲಿ
ಸುಂದರ ಕನಸಿರಲಿ
ಪ್ರೀತಿ ಎಂಬ ಹೂವಿನ ಗಂಧ ನನಗಾಗಿ ತೇಲಿ ಬರಲಿ....!
ಪ್ರೀತಿಯ ಅರ್ಥ ನಾ ಅರಿತೇ
ನಿನ್ನಂದಕೆ ನಾ ಮನಸೋತೆ
ಬರುತ್ತಿಲ್ಲ ಬಾಯಿಂದ ಮಾತೆ
ಆ ಖುಷಿಯಲ್ಲಿ ನನನ್ನೇ ನಾ ಮರೆತೇ
ಪ್ರೇಮದ ಹೂವಲ್ಲಿ ಗಂಧವಾಗಿ ನಾನು ಬೆರೆತೆ......!
ಎಂದೆದೂ ನಾ ನಿನಗಾಗಿ
ಕಣ್ಣಲ್ಲಿ ಬಿಂಬವಾಗಿ
ತುಟಿಗಳಲಿ ನಗುವಾಗಿ
ಹೆಜ್ಜೆ ಹೆಜ್ಜೆಯಲ್ಲಿ ಗೆಲುವಾಗಿ
ಇರಲು ಬಂದೆ ನಾನಿಂದು ಸಾವಲ್ಲೂ ನಿನ್ನ ಜೊತೆಯಾಗಿ......! ಪ್ರೀತಿಯ ಹೃದಯ
- Swati S
17 Oct 2022, 11:30 pm
Download App from Playstore: