ಒಲವು
ಬರಡು ಬಾಳು ಕೊರಡು ಭಾವ
ಕಾಡ ದಾರಿ ನೀರ ಸುಳಿವು
ಬದುಕ ಹಾದಿ ಸವಿದಿದೆ
ಉಲಿಯುತ್ತಿದ್ದ ಮಧುರ ಗೀತೆ ತಾನೇ ಮುಕವಾಗಿದೆ
ಮಣ್ಣ ವೀಣೆ - ಮಣ್ಣ ತಂತಿ
ಚಿಗುರು ಬೆರಳು ನಾದ ಮೀಟೇ
ರಾಗದೊರೆತ ಹುಟ್ಟದು
ಹಳೆಯ ಮೆಲಕು ಮುಂದೆ ಮುಸಕು
ಒಳವದೇಕೋ ದಕ್ಕದ್ದು
ಇದರ ನಡುವೆ
ಮೇಲನ್ನೆಲ್ಲೋ ಕೇಳಿ ಬಂದ ನಿನ್ನ ಕರೆಗೆ
ಮರೆತ ಮಾತು ಇರದ ಭಾವ ಮತ್ತೆ ತೆಲಿಬಂದಿದೆ
ಗಾಳಿ ತೀಡಿದಂತಿದೆ!❣️
- Swati S
22 Oct 2022, 11:47 am
Download App from Playstore: