ಹಣತೆ
ಬಾನಿನಲ್ಲಿ ಸೂರ್ಯನಿದ್ದರೂ
ಕತ್ತಲ ಕೋಣೆಯಲ್ಲಿ
ಹಣತೆಯೇ ಸೂರ್ಯ!
ಕತ್ತಲ ಓಡಿಸೋ
ಒಂಟಿನಾವಿಕ ಹಣತೆಯ
ಬದುಕು ತಾತ್ಕಾಲಿಕ
ಆಯಸ್ಸು ಇದ್ದಷ್ಟು ದಿನ ಬದಕು
ಎಣ್ಣೆಯಿದಷ್ಟು ಹೊತ್ತು
ಉರಿಯೋದು ಹಣತೆ!
ಹಣತೆಗೆ ಇಲ್ಲ ಜಾತಿಭೇದ
ಹೆಣ್ಣು ಗಂಡು ಎಂಬ ನಿರ್ಬಂಧ
ಯಾರು ಹಚ್ಚಿಟರು ಬೆಳಗುತ್ತದೆ
ಸಂಸಾರವೇ ಒಂದು ಹಣತೆ
ಪರಸ್ಪರ ಪ್ರೀತಿಸಿ
ಹಣತೆಯೋಳಗಿನ ಎಣ್ಣೆ ಬತ್ತೀಯಂತೆ!
- Swati S
24 Oct 2022, 01:15 pm
Download App from Playstore: