ಬೆಳಕಿನ ಹಬ್ಬ
ನಾವು.....
ಕಷ್ಟ ಅನುಭವಿಸಿದ್ದೇವೆ ಈ ಹಿಂದೆ
ಅದೊಂದು ರೀತಿಯ ಹುಳಿ;
ಕಷ್ಟ ದಾಟಿ ಮುಂದೆ ಸಾಗಿ
ಸಮಾಧಾನದಿಂದ ತಾಳಿ;
ಎಲ್ಲರಿಗೂ ಸಂತೋಷ ಬಯಸಿ
ಅಂತೆಯೇ ಬಾಳಿ;
ಬೆಳಕಿಗೆ...
ನನ್ನಲ್ಲಿ ಅಡಗಿದ ನೀಚ
ಗುಣ ತುಳಿ;
ಮೋಸದ ಪ್ರಪಂಚಕ್ಕೆ ಬರಲಿ
ಬಿರುಗಾಳಿ;
ಮನುಷ್ಯರಿಂದ ಮನುಷ್ಯ ಹಾಗೇ,
ದೀಪದಿಂದ ದೀಪಕ್ಕೆ ಮಾನವನೇ ನಾಂದಿ
ಆಗುವ ಆವಳಿ;
ಇದೇ ಹರುಷದಿಂದ ಹೊತ್ತಿದ ಪಣತಿ
ಶಾಂತವಾಗದೀರಲಿ ;
ಭಾವ ತುಂಬಿ ಮನಸಾರೆ ಆಚರಿಸೋಣ
ಈ ಬೆಳಕಿನ ಹಬ್ಬ ದೀಪಾವಳಿಯ.....*
ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು
- Laxmi Dabbanavar
26 Oct 2022, 03:52 pm
Download App from Playstore: