ನಗುವಿನ ಸರದಾರ
ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ,
ಮನಗಳಲ್ಲಿ ನಂಬಿಕೆ ಭಾವ ಮೂಡಿಸಿ,
ನಮ್ಮೆಲ್ಲರ ಏಳಿಗೆಯತ್ತ ಕೈ ಮಾಡಿ ಕಳಿಸಿ,
ನೋವಲ್ಲಿದ್ದವರನ್ನ ನಗುಮುಖದಿಂದ
ಸಮಾಧಾನಿಸಿ,
ನಗು ಮುಖದ ರಾಜಕುಮಾರ ಯೇನಿಸಿ,
ಕೊನೆವರೆಗೂ ಶತ್ರುವಿಗೂ ಒಳ್ಳೆಯದೇ ಬಯಸಿ,
ತನ್ನ ಜೀವನ ಪ್ರಯಾಣ ಮುಗಿಸಿ,
ಈ ಕ್ಷಣ ಎಲ್ಲರಿಂದಲೂ ಅಳಿಸಿ,
ಮನುಕುಲದ ಮನಗಳಲ್ಲಿ ನೆಲೆಸಿ,
ನೆನಪಿಸಿಕೊಳ್ಳುತ್ತಾ ಒಂದು ವರ್ಷ ಸಾಗಿಸಿ,
ಹೋದ ಆ (ದೈವ) ಜೀವ ಮರಳಿ ಬರಲೆಂದು ಆ ದೇವರಲ್ಲಿ ನಮಿಸಿ,
*.... ಅಪ್ಪು.....*
- Laxmi Dabbanavar
29 Oct 2022, 09:24 am
Download App from Playstore: