ಪುನೀತ್ ರಾಜಕುಮಾರ್

ಇದ್ದರೆ ಪುನೀತನಂತೆ ಇರಬೇಕು...
ನಡೆದರೆ ದೇವರು ಮೆಚ್ಚುವಂತೆ ನಡೆದುಕೊಳ್ಳಬೇಕು...

ದುಡ್ಡು ಇದೆ ಎಂದು ಅಹಂಕರವನ್ನು ತೋರಲಿಲ್ಲ...
ದೊಡ್ಡ ವ್ಯಕ್ತಿಯೆಂದು ಸೊಕ್ಕಿನಿಂದ ಮೆರೆಯಲಿಲ್ಲ...
ತನ್ನ ಮಾತಿನಿಂದ ಯಾರ ಮನಸ್ಸಿಗೂ ನೋಯಿಸಲಿಲ್ಲ...
ದೊಡ್ಡ ಹೆಸರಿದೆಯೆಂದು ತೋರಿಸಿಕೊಳ್ಳಲಿಲ್ಲ...
ಈ ನಮ್ಮ ಪುನೀತಾ...
ಇದ್ದದ್ದನ್ನು ಇದ್ದ ಹಾಗೆಯೇ ದಾನ ಮಾಡಿದ...
ಮತ್ತೊಬ್ಬರ ನೋವಿಗೆ ಸ್ಪಂದಿಸಿದ...
ಇನ್ನೊಬ್ಬರ ಜೀವನವು ಸುಖದಿಂದ ಇರಲಿ ಎಂದು ಹಾರೈಸಿದ...
ನಮ್ಮ ನೆಚ್ಚಿನ ಅದ್ಭುತವಾದ ವ್ಯಕ್ತಿ ಅಗಿ...
ದೇವರ ಸರಿಸಮವಾಗಿ ಹೊರಟೆ ಹೋದ...
ಈ ನಮ್ಮ ಪುನೀತಾ...

ಮತ್ತೆ ಹುಟ್ಟಿ ಬಾ ಎಂದು ಹೇಳುವ ಬದಲು...
ನೀನಂತೆ ಬದುಕುವೆವು...
ನೀನಂತೆ ನಡೆಯುವೆವು...
ನೀನಂತೆಯೇ ಇರುವೆವು...
ಮತ್ತೊಬ್ಬರ ಕಷ್ಟಕ್ಕೆ ನೆರವಾಗುವೆವು ಎಂದು ಮನ ಹೇಳಲು ಬಯಸುವುದು...

_Aksh_Akshita_

- Akshita Paragi

29 Oct 2022, 03:45 pm
Download App from Playstore: