ಕಾಯುತ್ತೇನೆ ನಾನು..
ಹೂವು ನನ್ನತ್ತ ತಿರುಗ ಬಾರದೆ ಎಂದು,
ತಿರುಗುವ ಮನಸು ಹೂವಿಗೆ ಇಲ್ಲವಾದರೂ
ಗಾಳಿಯ ನೆವಕ್ಕಾದರೂ ಕೊಂಚ
ಹೊರಳ ಬಾರದೆ ಇತ್ತ ?
ಕಣ್ಣೆತ್ತಿ ನೋಡದ ಹೂವಿನ ಸುತ್ತ
ಗಿರಕಿ ಹೊಡೆವ ದುಂಬಿಗಳ ದಂಡು
ಚಿತ್ತ ಚಂಚಲವಾಗಿಲ್ಲ ಕಿಂಚಿತ್ತೂ
ಹೂವಿಗೆ ನೂರು ದುಂಬಿಗಳ ಕಂಡು
ನೂರೊಳಗೊಬ್ಬ ನಾನಾಗಿ
ಹೂವ ಬನದೊಳಗೆ
ಬರಿಗೈಲಿ ಕಳೆದು ಹೋಗಿ
ಹೂವ ಕಂಪಲ್ಲೇ ಹೃದಯ ನಿಂತು ಹೋಯ್ತಲ್ಲೇ
ತಿರುಗಲಿಲ್ಲ ಹೂವು
ದುಂಬಿಯ ಹೆಣ ಕಂಡೂ
ಕದಡಲಿಲ್ಲ ಮನ
ಮುತ್ತಿಕೊಂಡರೂ ದುಂಬಿಗಳ ಹಿಂಡು !
- ಶ್ರೀಗೋ.
02 Aug 2016, 11:57 am
Download App from Playstore: