ಬೆಟ್ಟದ ಹೂ
ಅದೋ ಅಲ್ಲಿ , ಅರಳಿದೆ ನೋಡು
ಕೃಷ್ಣವರ್ಣದ ,ಸುಹಾಸದ,
ಸುವಾಸದ ಬೆಟ್ಟದ ಹೂ.
ಬೀಸುವ ತಂಗಾಳಿಗೆ ತಲೆದೂಗುವ,
ದುಂಬಿಗಳ ಕೈ ಬೀಸಿ ಕರೆಯುವ,
ಮನಮುಟ್ಟುವ ಬೆಟ್ಟದ ಹೂ.
ಹಾರುವ ಮೋಡಗಳ ಕೈಬೀಸಿ ಕರೆಯುವ,
ಇಂದ್ರಚಾಪಕೆ ಕೊರಳನು ಚಾಚಿ,
ನಲಿನಲಿಯುವ ಬೆಟ್ಟದ ಹೂ.
ಮಾಲಿನ್ಯದ ಎಣೆ ಇಲ್ಲದೆ,
ಮಾನವನ ಹಂಗಿಲ್ಲದೆ,
ನಸುಸಂಜೆಗೆ ಕಾಯ್ವ ಬೆಟ್ಟದ ಹೂ
- ಅರುಣಕುಮಾರ ಮ ಜೇವರಗಿ
16 Nov 2022, 08:36 pm
Download App from Playstore: