ಸ್ನೇಹ ಬಂಧ
ಪರಿಚಯಕೆ ಬೇಕಿಲ್ಲ ಏನು ಕಾರಣ
ಮುಗ್ಧನಗುವೇ ಈ ಸ್ನೇಹಕೆ ತೋರಣ
ನೂರಾರು ಬಂಧಗಳು ಒಂದೇ ರೂಪದಲ್ಲಿ
ದೈವವಿತ್ತು ಸ್ನೇಹವೆಂಬ ವರದ ಹೆಸರನಲಿ..
ಕರಗುವ ಕಂಬನಿಗೂ ನೀನೆ ಬೇಕಂತೆ ನೋಡು
ನೊಂದ ಹೃದಯಕ್ಕೂ ನಿನ್ನ ಮಡಿಲಂತೆ ನೀಡು
ಅರಿತೆ ಮೌನದಲಿಡಗಿಹ ಆ ನೂರು ಭಾವದ
ನುಡಿಸಿದೆ ನೀ ಹೃದಯ ವೀಣೆಯ ಮೌನ ರಾಗವ..
ಸಿರಿತನವು ಬೇಕಿಲ್ಲ, ಬಡತನವು ಸೋಗಿಲ್ಲ
ನೋವು ನಲಿವು ಹಂಚೋ ಆ ಭಾವ ಸಾಕಲ್ಲ
ಕಷ್ಟ ದಲ್ಲಿ ಹೆಗಲಾಗಿ ಬೇಸತ್ತ ಹೆಜ್ಜೆಗ್ಗೆ ನೆರಳಾಗಿ
ನಿಂತೇ ಪ್ರೇಮಿಯ ಪ್ರೀತಿಯ ಮೀರಿಸೋ ಪರಿಯಾಗಿ..
ನಿಸ್ವಾರ್ಥ ರೂಪದಲ್ಲಿ ಪ್ರತಿಫಲಿಸೋ ಜ್ಯೋತಿಯೂ
ಮನದ ತಮವ ಕಳೆವುದು ಸ್ನೇಹದ ಹಣತೆಯು
ಬರದಿ ಬೀಸೋ ಗಾಳಿಗೇನು ಬರವಿಲ್ಲ ಇಲ್ಲಿ
ಆದರೂ ಆರದಂತೆ ಸದಾ ಉರಿಯುವುದು ನೋಡಿಲ್ಲಿ..
ಸ್ವಾತಿ S...........
- Swati S
17 Nov 2022, 01:15 am
Download App from Playstore: