ಮುಗಿದ ಪಯಣ
ಇದು ನನ್ನ ಕೊನೆಯ ಪಯಣ
ಮುಗಿದಿದೆ ಈ ಭೂಮಿಯ ಋಣ
ಕೊನೆಯ ಸವಾರಿ ಇದು
ಮಣ್ಣಿನೊಳಗೆ ಮಣ್ಣಾಗುವುದು
ಹೆತ್ತವರ ಕನಸಾಗಿದ್ದೆ ನಾನು
ನನ್ನ ಪರಿವಾರವ ಬಿಟ್ಟು ಬಂದೆನು
ಇನ್ನೆಂದೂ ಕಾಡುವುದಿಲ್ಲ ಸಂಬಂಧ
ಮುಗಿದಿದೆ ಎಲ್ಲಾ ಅನುಬಂಧ
ನೆನಪುಗಳು ಮಾತ್ರ ನನ್ನವರಿಗಿನ್ನು
ದೇಹವಿಲ್ಲದ ಆತ್ಮವು ಮಾತ್ರ ನಾನು
ಪಾಪ ಪುಣ್ಯಗಳ ಲೆಕ್ಕಾಚಾರ ದೇವರಿಗೆ
ನಾ ಹೊರಟಿರುವೆ ಮಸಣದ ದಾರಿಗೆ
ಚಿರ ನಿದ್ರೆ ಪ್ರಾರಂಭವಾಗಿದೆ ನನಗೆ
ಇಂದು ಅಂತಿಮ ಯಾತ್ರೆ ಮುಗಿದಿದೆ
ಯಾರ ಮಡಿಲಲೆ ಬೆಳೆದರು
ಕೊನೆಯ ಹೆಗಲು ಪರರದು
ಉಸಿರು ಮಾತ್ರ ತಂದೆ ಇಳೆಗೆ
ಹೆಸರು ಕೂಡ ಉಳಿಯಲಿಲ್ಲ ಕೊನೆಗೆ
ಆಗ ಜನನವೆಂದು ಜಾತಕ ಬರೆಸಿದರು
ಈಗ ಮರಣವೆಂದು ಸೂತಕ ತೆಗೆಯುವರು
ಮುಗಿದ ಅಧ್ಯಾಯ ನನ್ನದು
ಅಂತಿಮ ಧನ್ಯವಾದ ಧರಣಿಗಿದು
- Tanuja.K
20 Nov 2022, 12:54 am
Download App from Playstore: