ಸಮಯ
ಎಲ್ಲರಿಗೂ ಇರುವುದು ೨೪ ಗಂಟೆಯ ಸಮಯ
ಆದರೂ ಹೇಳುವರು ನನಗಿಲ್ಲ ಸಮಯ
ಅವರಿವರ ಬಗ್ಗೆ ಮಾತಾಡಿ ಕಳೆಯುವರು ಸಮಯ
ತನಗಾಗಿ ಯೋಚಿಸುವುದ ಮರೆಸಿತು ಸಮಯ
ಯೋಚನೆಯ ಮಾಡಲು ಇರುವುದು ಸಮಯ
ಯೋಜನೆ ಮಾಡಲು ಇಲ್ಲ ಸಮಯ
ಬಡವನಿಗೆ ಬಲ್ಲಿದನಿಗೆ ಇರುವುದು ಒಂದೇ ಸಮಯ
ಯಾರಿಗೂ ಕಾಯದೆ ಕಳೆಯುವುದು ಸಮಯ
ಎಲ್ಲರೂ ಬಳಸುವರು ಮಹತ್ವದ ಸಮಯ
ಆದರೆ ಎಲ್ಲರಿಗೂ ತಿಳಿಯಲಿಲ್ಲ ಆಸ್ತಿ ಎಂಬುದು ಸಮಯ
- Tanuja.K
20 Nov 2022, 01:07 am
Download App from Playstore: