ಶಿವ
ನೀನೊಂದು ಮಹಿಮೆ
ನಿನ್ನ ದಯೆ ನನ್ನ ಹಿರಿಮೆ
ಬಾಳು ನೀ ಕೊಟ್ಟ ಭಿಕ್ಷೆ
ನೀನೆ ನನಗೆ ರಕ್ಷೆ
ಕಾರ್ಯ ಕಾರಣಗಳು ಬೇಡ ನಿನ್ನ ನಂಬಲು
ನೀನೊಬ್ಬ ಸಾಕು ಈ ಜೀವನ ಸಂಪೂರ್ಣವಾಗಲು..
ಕಣ್ಣಂಚಲ್ಲಿ ನೀರು ತಂದವರು ಸಾವಿರ ಜನ
ಕಣ್ಣೊರೆಸಿದ ದೈವ ನೀನು ಮಾತ್ರ
ಧೈರ್ಯ ತುಂಬಿದ ಗುರುವು ನೀನು
ಬದುಕುವ ಛಲ ಹುಟ್ಟಿಸಿದ ತಂದೆ ನೀನು
ಆತ್ಮ ಸ್ಥೈರ್ಯವ ತುಂಬಿದವನು ನೀನು
ಆತ್ಮ ತೃಪ್ತಿಯಂತೆ ಬದುಕುತ್ತಿರುವವಳು ನಾನು..
ನನ್ನ ನೋವನ್ನು ಕಂಡು ಕಾಡದಂತೆ ನಡೆದವರೆ ಹೆಚ್ಚು
ಸ್ವಾರ್ಥ ಜನರ ಸಂತೆಯಲಿ ನನ್ನ ದೂರಿದವರು ಮತ್ತೊಂದಷ್ಟು
ಏನೇ ಆಗಲಿ ಸ್ವಾಭಿಮಾನವ ಬಿಡದ ಹೆಣ್ಣು ನಾನು
ನೀ ನನ್ನೊಂದಿಗಿರುವಾಗ ಮತ್ತಾರ ಹಂಗೇಕಿನ್ನು...
- Tanuja.K
20 Nov 2022, 08:03 am
Download App from Playstore: