ಗಜಲ್


ಎಷ್ಟೊಂದು ಸುಂದರವಾಗಿ ಗೀಚಿಹನು ನಿನ್ನನು ಯಾವ ಶಿಲ್ಪಿಯು
ಎಷ್ಟೊಂದು ಆಕರ್ಷಣೆ ನಿನ್ನಲಿ ತುಂಬಿಹನು ಯಾವ ಶಿಲ್ಪಿಯು

ಕೋಮಲ ಮನಸು ನವಿರಾದ ಮೆರಗು ಬಣ್ಣದ ಚಿಟ್ಟೆಯ ರೂಪವು
ನೋಡಿದರೆ ನೋಡುತ್ತಲೆ ಇರಬೇಕೆಂಬ ಆಸೆ ಇಟ್ಟವನು ಯಾವ ಶಿಲ್ಪಿಯು

ಜಿಂಕೆಯ ಕಣ್ಣು ಬಳುಕುವ ಬಳ್ಳಿ ತುಂಬಿದ ರಸ ಭರಿತ ಮಾವು
ಸವಿದ ಸವಿಯು ಕವಿತೆಗೆ ಸಿಗದ ಭಾವವು ಕೊಟ್ಟವನು ಯಾವ ಶಿಲ್ಪಿಯು

ಸ್ಪರ್ಶದಲಿ ಹಿತ ಮಾತಿನಲಿ ಮಾಣಿಕ್ಯ ಜೀವನ ನಿನ್ನಿಂದ ಸಾರ್ಥಕವು
ನೀನಿಲ್ಲದ ಪಯಣ ಮುಗಿಯದ ಕತೆಯಂತೆ ಬರೆದವನು ಯಾವ ಶಿಲ್ಪಿಯು

ನಿನ್ನಿಂದಲೇ ಉನ್ನತಿ ನಿನ್ನಿಂದಲೇ ಅವನತಿ ನಿರ್ಮಾಪಕ ನಿರ್ನಾಮಕಳು
ಜಗದ ಬೆಡಗೆಲ್ಲ ನಿನ್ನಲಿ ತುಂಬಿ ನವಿಲಿನಂತೆ ಕಟೆದವನು ಯಾವ ಶಿಲ್ಪಿಯು

ಆಕಾಶ ಭೂಮಿ ಸೂರ್ಯ ಚಂದ್ರ ಹಗಲು ರಾತ್ರಿಯಂತೆ ಬಂಧವು
ಯುಗ ಯುಗದಿಂದ ನಡೆವ ಬಂಡಿಗೆ ಗಾಲಿ ಕಟ್ಟಿದವನು ಯಾವ ಶಿಲ್ಪಿಯು

ಸೃಷ್ಟಿ ಸೌಂದರ್ಯದ ಅನುಪಮ ರತುನ ಮಯೂರ ಸಿಂಹಾಸಿನಿಯು
ಆದರ ಆತಿಥ್ಯ ಸದಾಕಾಲ ಸಲ್ಲುವಂತೆ ಅಲಿ ಅಕ್ಷರ ಬಿತ್ತಿದವನು ಯಾವ ಶಿಲ್ಪಿಯು

~ ಅಲಿಬಾಬಾ ರವುಡಕುಂದಾ

- ALIBABA ROUDAKUNDA

22 Nov 2022, 08:11 am
Download App from Playstore: