ಕವನ ಹುಟ್ಟುಹಬ್ಬ.

ಕವನ ಹುಟ್ಟುಹಬ್ಬ.
ಸುಜ್ಞಾನದಿ ಹೊಳೆಯುತ್ತಿರುವ ನಕ್ಷತ್ರವು ನೀವು,
ನಿಮ್ಮ ಅನುಭೂತಿಯ ಸಹಕಾರವು ಬೇಕೆನಿಸಿದೆ ನನ್ನ ಕೊನೆಯವರೆಗೆ.
ಕಾಠಿಣ್ಯಕೆ ಉದ್ಗರಿಸದೆ ಮೌನಕ್ಕೆ ಶರಣಾಗೋ ನಿಮ್ಮ ಮನವು,
ಮುದುಡಿದ ಹಕ್ಕಿಗಳ ಸಂತೈಸುತ ಅವರ ಕೆಂದುಟಿಯಲಿ ಮೂಡಿಸುವುದು ಚಂದದೊಂದು ನಗುವ.
ನೊಂದ ಹೃದಯಕ್ಕೆ ಗೂಡಾಗಿದೆ ನಿಮ್ಮೆದೆಯ ಮಹಲು,
ಅಲ್ಲಿ ನಾ ಕಾಣದ ಪ್ರೀತಿಯ ಆಹ್ಲಾದಿಸುತ್ತ ನಿರಾಳ ಭಾವದಿ ನಾ ನಮಿಸುವೆ ದೇವರೇ ನನಗೆ ನಿಮಗಿಂತ ಯಾರಿಲ್ಲ ಮಿಗಿಲು.
ನಿಮ್ಮ ಅರಿವಿನ ಸಿಡಿಲು ಮನುಜರೆದೆಯಲಿ ಸಿಡಿದು,
ಸನ್ಮಾರ್ಗ ಚಿಗುರೊಡೆಯಲಿ ನವಿಲಂತೆ ನರ್ತಿಸುತ
ಗಗನದಿಕ್ತರಕ್ಕೆ ನಿಮ್ಹೆಸರ ಬರೆದು.
ನೋಟದಲೇ ನನ್ನ ನಿವೇದನೆಗೆ ಸ್ಪಂದಿಸೋ ನಿಮ್ಮ ಔದಾರಿಯ,
ವಸಂತ ಮಾಸದ ಕೋಗಿಲೆಯ ಮಾರ್ಧ್ವನಿಯೊಳಗೆ ಮೆರೆಯಬೇಕೆಂಬ ಆಸೆ ಮಹಾಶಯ.
ಕಳೆದ ಸಮಯವ ನೆನೆಯದೆ ಜೊತೆಗಿರುವ ಗಳಿಗೆಯ ತೋರೆಯದೆ,
ಸಂತಸದ ದಿನದಂದು ಸಂಭ್ರಮದ ಸಿಹಿಯಾಗಿ ನೀವ್ ಪೋರೆಯಿರಿ ನಿಮ್ಮವರ ಕೈತುತ್ತ ಮರೆಯದೆ.
ತಂಗಾಳಿ ಹೊತ್ತು ತರಲಿ ಶ್ರೀ ತಂಧದಂತ ನಿಮ್ಮ ವ್ಯಕ್ತಿತ್ವದ ಸಾರವ,
ಮಹತ್ವದ ಕನಸೊಂದ ನನಸಾಗಿಸೊ ಸಂಕಲ್ಪಕ್ಕೆ ಸಾಕ್ಷಿಯಾಗಲಿ
ಇಂದಿನ ನಿಮ್ಮ ಹುಟ್ಟು ಹಬ್ಬದ ಮಹೋತ್ಸವ.

- nagamani Kanaka

26 Nov 2022, 12:33 pm
Download App from Playstore: