ಕವನದ ಶೀರ್ಷಿಕೆ ಸಮಾನತೆ.

ವಿಶ್ವಸಂಸ್ಥೆಯ ಧೇಯವಾಗಿರುವ ಐಕ್ಯತೆ ಮಂತ್ರ,
ಮನುಜರೆದೆಯಲಿ ಮೂಡಬೇಕಿದೆ ಸಮಾನತೆ ಸೂತ್ರ.
ಪ್ರಕೃತಿ ಕೊಡುವ ನ್ಯೂನ್ಯತೆಗಳಿಗೆ ತಡೆ ಇದೇ ಏನು?
ಸಂಭವಿಸಿರುವ ಘಟನೆಗೆ ಸಿಲುಕಿ ಕೊರಗುವ ನಾವು
ಮಾಡಿದ ತಪ್ಪೇನು?
ಮಗುವು ಸ್ನೇಹದಿ ನಲಿಯಲು ಸಿಗಬೇಕು ತನ್ನವರಿಂದ ಸಹಕಾರ,
ವಿಕಲತೆಯ ಮರೆತು ಮಗು ಪಡೆಯುವಂತಾಗಬೇಕು
ಸಮನ್ವಯ ಶಿಕ್ಷಣದ ಸಾಕ್ಷಾತ್ಕಾರ.
ನಮಗಿಂದು ಉಲ್ಬಣಿಸೋ ಭೀಷ್ಮನಂತ ಕಷ್ಟಗಳ
ಚೈತನ್ಯದಿಂದ ಚಿವ್ತುವ ಬನ್ನಿ ಸಮಾಜದೊಳು ನಾವು ಬೆಲ್ಲದ ಸಿಹಿಯಾಗಿ.
ಸಮುದಾಯದಿ ಹರಡಿರೋ ನ್ಯೂನ್ಯತೆ ಮೇಲಿನ ಸಂದೇಹದ ಕಿಡಿಯ
ಸ್ವಾವಲಂಬನೆ ಬೆವರ ಹನಿಗಳಿಂದ ಆರಿಸಿ
ನಾವ್ ಕಿತ್ತೊಗೆಯುವ ಬನ್ನಿ ಅಸಮಾನತೆ ಕಳೆಯ.
ಎಲ್ಲರಿಂದ ಸಿಗಬೇಕು ನಮ್ಮ ಪ್ರಗತಿಗಾಗಿ ಪ್ರೇರಣೆ,
ಅಂತಹ ಸಮಗ್ರ ಸಮಾಜ ಸೃಷ್ಟಿಸುವುದು ನಮ್ಮೆಲ್ಲರ ಹೊಣೆ,
ಜಾಗೃತಿಗೊಂಡ ಜನತೆಯಿಂದ ಬಯಸದೆ ಲಭಿಸುವುದು
ವಿಕಲಚೇತನರಿಗೆ ಸಾಂವಿಧಾನಿಕ ರಕ್ಷಣೆ.

- nagamani Kanaka

03 Dec 2022, 09:59 pm
Download App from Playstore: