ಅನಾಮಿಕ

ನಲ್ಮೆಯ ಮನಸಿನ ಚಂದದ ನಾಯಕ
ನನ್ನ ಜೀವನದ ಅನಾಮಿಕ..

ದಿನಗಳು ಕಳೆದವು
ಕನಸುಗಳು ಕಾಲ ಗರ್ಭದಲಿ ಅಳಿದವು
ವರುಷಗಳು ಉರುಳಿದವು
ಜವಾಬ್ದಾರಿಗಳು ಬೆನ್ನೇರಿ ಬಂದವು...


ಎಲ್ಲಿರುವೆಯೋ ತಿಳಿದಿಲ್ಲ ನೀನಿನ್ನು
ಕಾಲಕ್ಕೂ ಕಾಯಿಸುವ ಆಸೆ ನನ್ನನ್ನು
ದೂರದೂರಿನ ಗೆಳೆಯ ನನ್ನವನು
ಸಮಯದ ಬೊಂಬೆ ನಾನಿನ್ನು....

- Tanuja.K

03 Dec 2022, 10:26 pm
Download App from Playstore: