ದಿನಕರ

ಹೇ ದಿನಕರ ಏನು ನಿನ್ನ ನೀತಿ
ನಿನ್ನ ಉದಯಕ್ಕಾಗಿ ಕಾಯುವುದು ಪ್ರಕೃತಿ


ಯಾರ ಹಂಗಿಲ್ಲ ನಿನಗೆ
ನೀನೇ ಬೆಳಕು ಬದುಕಿಗೆ
ನೀ ಬಂದರೆ ಜಗವು ಬೆಳಗುವುದು
ಅಜ್ಞಾನ ಸರಿದು ಜ್ಞಾನ ಮೂಡುವುದು..

ಏನು ನಿನ್ನ ಸಮಯ ಪಾಲನೆ
ಎಲ್ಲವೂ ಇಲ್ಲಿ ಕಾಲ ಗಣನೆ
ಯಾರಿಲ್ಲದಿದ್ದರು ಬರುವೆ ನೀನು
ಬದುಕಿನುದ್ದಕ್ಕೂ ಜೊತೆಗಾರ ನೀನು..

ಸಮಯಕ್ಕೆ ತಕ್ಕ ಬದಲಾವಣೆ ನಿನ್ನದು
ನಿನ್ನ ಕರ್ತವ್ಯ ಮಾತ್ರ ನಿಲ್ಲದು
ಕಾಲಗರ್ಭದಲಿ ಎಲ್ಲವು ಸೇರುವುದು
ಏಕಾಂಗಿಯದರು ನಿನ್ನ ದಿನಚರಿ ನಿಲ್ಲದು...

- Tanuja.K

03 Dec 2022, 10:41 pm
Download App from Playstore: