ಕನ್ನಡ
ನಮ್ಮಕನ್ನಡವೇ ಸುಂದರ
ಸುಮಧುರ ಮಂದಾರ
ಯಶಸ್ಸಿನ ಕಂದರ
ಒಲವಿನ ಮಮಕಾರ ನಯನ ಮನೋಹರ
ಮಾನವ ಮುಚ್ಚುವ ಖಾದಿ ಬಟ್ಟೆಯೂ
ಮಾನವನೇ ಮೆಚ್ಚುವ ವೀಣೆಯ ನಾದವೂ
ಶೌರ್ಯ ವ ಕಲಿಸೋ ವನಿತೆಯರು
ಹುಳಿಗು ಮಣಿಸುವ ಕಲಿ ಶೂರರೂ||ನಮ್ಮ||
ಶಿಲ್ಪವೇ ತುಂಬಿರೋ ಬೇಲೂರು ಹಳೆಬೀಡು
ಕಲ್ಪಕು ನಿಲುಕದ ಜೋಗದ ಬಂಡಿ
ಮೈಸೂರು ಮಂಡ್ಯ ಉತ್ತರ ಕನ್ನಡ
ಬೆಂಗಳೂರು ಬೆಳಗಾವಿ ದಕ್ಷಿಣ ಕನ್ನಡ || ನಮ್ಮ||
ಹೆಣ್ಣುಗಳಲ್ಲ ಅಕ್ಕ ಅಮ್ಮ
ಗಂಡುಗಳೆಲ್ಲ ಅಣ್ಣ ತಮ್ಮ
ಸೋದರ ಸೋದರಿ ನಾವೆಲ್ಲ
ಇಂತಹ ಬೀಡು ಜಗದಲೆ ಇಲ್ಲ.||ನಮ್ಮ||
- Nisha anjum
08 Dec 2022, 06:21 pm
Download App from Playstore: