ಅಪಶಕುನ.....!
ಕಂಬನಿಯ ಮಿಡಿತ ಸೇರಲು
ನನ್ನ ಒಡಲಲ್ಲಿ
ಅಯ್ಯೋ ಏನೋ ತಳಮಳ
ಒಳಗೆ ಓಡಿದೆ ಆಗ
ಬೀಳಲು ಹಲ್ಲಿ ರಾಯ
ಅಪಶಕುನ ಎಂದು
ಬಾಗಿಲ ಮುಚ್ಚಿದೆ .
ಬಾಗಿಲಲ್ಲೇ ನನ್ನ ವಿಧಿ ಯ
ಅಲಿಸೆದಂತೆ ಎನಿಸಿ ಒಳ ಓಡಿದೆ
ಹೊರಗೆ ಏನೋ ಶಬ್ದ
ಜೋರಾಗಿ ಹಾಡು ಹಾಡಿದೆ ಭಯದಿಂದ
ಮುಂಜಾವು ಹುಂಜದ ಕೂಗು
ಕೇಳಿದ ನನ್ನ ಕಿವಿ
ತೆರೆಯಲು ಬಾಗಿಲು
ಬಾಗಿಲಲ್ಲಿ ಬಿದ್ದಿದೆ ನನ್ನ ಶ್ವಾನದ
ಸುಂದರ ಪ್ರೀತಿಯ ಶವ
ಅಪಶಕುನವೇ ನನ್ನ ಕಣ ಕಣದಲ್ಲೂ
ಮನದಲ್ಲೂ ಮನೆ ಮಾಡಿ
ಕೊಂಡಿದೆ ನನ್ನ ಪ್ರೀತಿಯ....!
- Nisha anjum
08 Dec 2022, 06:21 pm
Download App from Playstore: