ತವರೂರ ಮಗಳು

ಹರಸು ದೇವ ಏನ್ನ ತವರಿಗೆ ||೨||

ಕದವ ಬಡಿಯೋರು ಯಾರು ಹೆಸರ ಕರೇವರಾರು
ನಿಮ್ಮ ಹೆಸರ ಹೇಳಿರಿ
ಬರಲಿಲ್ಲ ನನ ರಾಯ ಬಂದಾಗ ನಿಮ್ಮ ನೆನಿತಿನಿ.

ನನ್ನ ತಂಗಿ ಇಲ್ಲವಳೇ ಲಕುಮಿ ಹಂಗ ಕಾಣುತ್ತಾಳೆ
ಅವಳ ಕರೆಯೋಕೆ ಬಂದೀವ್ನಿ ಜಾತ್ರೆಗೆ..

ಅಪ್ಪಾ ಚಂದಾಗವ್ರ ಅವ್ವ ಚಂದಾಗವ್ರ ನೀನು
ಹೇಗಿದ್ದೀಯ ಅಣ್ಣಯ್ಯ??

ಮಾದಪ್ನ ದಯೆಯಿಂದ ಇಬ್ರೂ ಚಂದಾಗವರೆ
ನಿನ್ನ ನೆನೆದು ಅಳುತಾರೆ ಜಾತ್ರೆಗೆ ಕರೆಯಲು ನನ್ನ
ಕಳುಹೋರೆ

ಉಡುಗೊರೆ ಬೇಡಣ್ಣ ನೀನೇ ಸಾಕಣ್ಣಾ
ಆಟು ದೂರದಿಂದ ಬಂದಿಯೋ ನನ್ನ ಅಣ್ಣ
ಮಾಡ್ತೀನಿ ನಿನ್ನ ಹೊಟ್ಟೆ ತಣ್ಣಗೆ

ಮುಳಗುಂದ ಮಾಂತಾಜ್ಜ ನ ಜಾತ್ರೆ ಬಂದೇತಿ
ನಾವು ಅಲ್ಲಿಗೆ ಹೊಂಟೀವಿ
ನೀನು ನಿನ್ನ ಪರಿವಾರ ಕರಕೊಂಡು ಬಾರ್ಯವ್ವ
ಆ ದೇವ ನಮಗೆಲ್ಲ ಒಲಿತಾನ

ಉಡುಗೊರೆ ಕೊಟ್ಟಾಳ ನಿನಗ ಹೆತ್ತವ್ವ
ನೀನು ಖುಷಿಯಿಂದ ಇರಬೇಕಂತೆ

ನತ್ತು ಗೆಜ್ಜಿ ಓಲೆ ಮಾಲೆ ಬಳೆ ಎಲ್ಲವ
ಕೊಟ್ಟು ಕಳಿಸ್ಯಾಳ ನಿನಗಾಗಿ

ಇಳಕಲ್ ಸೀರೆ ಉಟ್ಟು ಕುಂಕುಮ ಹಚ್ಚಿಕೊಂಡು
ಹೂ ಮುಡ್ಕೊಂಡು ಬಾರ ಯವ್ವ ಗಂಡ ಮಕ್ಕಳು
ಕರಕೊಂಡು

ಹೊಂತಿನಿ ಅವ್ವ ಊರಿಗೆ
ಮರೆಯದೆ ಬಾರ್ಯವ್ವ ಜಾತ್ರೆಗೆ .....

- Nisha anjum

12 Dec 2022, 07:35 pm
Download App from Playstore: