ಅಂಧ ಭಕ್ತರು

ಮೂಢರಿಗೆ, ಅಂಧ ಭಕ್ತರಿಗೆ
ಜೀವವಿಲ್ಲದ ಕಲ್ಲೇ ದೇವರಾದರೆ
ನನ್ನ ತಂದೆ ತಾಯಿಯೇ
ನನ್ನ ಮನೆಯ ದೇವರು

ಮೂಢರು ಮಾಡುವರು
ದೇವರಿಗಾಗಿ ಉಪವಾಸ
ನಾ ಮಾಡುವೇನು
ನನ್ನ ಹೇತ್ತವರ ಸೇವೆಗಾಗಿ
ದುಡಿಮೆಯ ಕಾಯಕ

ಉಸಿರಾಟದ ಮುಂದೆ
ಯಾವುದೇ ದೇವರುಗಳ
ಉಸರವಳ್ಳಿ ಆಟವಾಗಲಿ
ನವ ಯುಗದ ಮಾನವನ
ಮಂಗನಾಟವಾಗಲಿ
ನವರಂಗಿ ಆಟವಾಗಲಿ ನೆಡೆಯಾದು



- ರಾಜು ಹಾಸನ

13 Dec 2022, 01:52 pm
Download App from Playstore: