ಪ್ರೀತಿ


ಮರವ ಸುತ್ತಿದ ಬಳ್ಳಿಯಂತೆ
ನಿನ್ನ ಪ್ರೀತಿಯ ಮಾಡಿಹೆ
ನೀರ ಮೇಲಿನ ಗುಳ್ಳೆಯಂತೆ ನೀ
ನನ್ನ ಮನಸ ಒಡೆದಿಹೆ

ಹಗಲು ರಾತ್ರಿ ಕಷ್ಟ ಸುಖವ
ತೊರೆದು ಪ್ರೀತಿ ಮಾಡಿದೆ
ಎಲ್ಲೋ ಬಚ್ಚಿ ಇದ್ದ ಮನಸ
ನೀನು ಕದಡಿ ಕಲಕಿದೆ

ಬೇಕು ಬೇಡ ಎಲ್ಲ ಮರೆತು
ನಿನ್ನ ಸಂಗ ಮಾಡಿದೆ
ಮನೆಯ ಕಡೆಗೆ ಗಮನ ಕೊಡದೆ
ನಿನ್ನ ಎಡೆಗೆ ವಾಲಿದೆ

ಕೂಲಿ ನಾಲಿ ಮಾಡಿ ನಾನು
ನಿನ್ನ ಹೊಟ್ಟೆ ತುಂಬಿದೆ
ಒಂದು ಮಾತು ಕೇಳದೇ ನೀ
ನನ್ನ ಕಿತ್ತು ಬಿಸಾಡಿದೆ

ಚಕ್ರದೊಳಗಿನ ಗಾಳಿಯಂತೆ
ನಿನ್ನ ಸೇವೆ ಮಾಡಿದೆ
ಮುಳ್ಳ ಚುಚ್ಚಿ ನೀನು ನನ್ನ
ಹೊರಗೆ ಹೋಗೆಂದು ಹೇಳಿದೆ

ಒಂದು ಕ್ಷಣವೂ ಬಿಡದೆ
ನಿನ್ನ ಚಿಂತೆಯಲಿ ನಾನಿರುವೆನು
ನಿನ್ನ ವಿರಹದ ನೋವಿನಲಿ ನಾ
ಜಡಕೆ ಸಮನಾಗಿರುವೆನು.
✍️ಫೀಲಿಂಗ್

- ನೆನಪಿನ ಕವಿತೆ

15 Dec 2022, 06:32 pm
Download App from Playstore: