ಆಸರೆ
ಏಕಾಂಗಿ ಪಯಣಕೆ
ನೀನಾದೆ ಬೆಳಕಿನ ಆಸರೆ
ಕನಸುಗಳ ಬಣ್ಣದ ಲೋಕವಿದು
ಕಾಡುತಿದೆ ನನ್ನನ್ನೇ ತಡೆದು
ಕರವಿದು ಕೈ ಚಾಚಿ ಕರೆದಿದೆ ನಿನ್ನ
ಮನಸಾರೆ ಮೆಚ್ಚಿ ಬರುವೆಯ ಚಿನ್ನ
ನಿನ್ನ ಎದೆಯೊರಗಿ ಹೃದಯ ಬಡಿತ ಕೇಳಬೇಕು
ನಿನ್ನ ಬೆಚ್ಚನೆಯ ಅಪ್ಪುಗೆ ಸಾಕು
ನಿನ್ನ ಕೋಪ ಅಂದ, ಪ್ರೀತಿ ಚೆಂದ
ಮುದ್ದು ಮಾತು ಇನ್ನೂ ಚೆಂದ
ನಿನ್ನ ಕರುಣಿಸಿದ ಆ ದೇವರಿಗೆ ನನ್ನ ನಮನ
ಹೀಗೆ ಇರಲಿ ನಮ್ಮ ಬೇವು ಬೆಲ್ಲದ ಜೀವನ...
- Tanuja.K
17 Dec 2022, 11:10 pm
Download App from Playstore: